ಬುಧವಾರ, ಏಪ್ರಿಲ್ 24, 2019

ವಿಮರ್ಶೆಗಳು

[4/12, 7:18 AM] +91 98446 38300: ಪ್ರೇಮ ಅವರ ಒಲವಿನ ಹೃದಯಕೆ ಹುಟ್ಟು ಹಬ್ಬದ ಶುಭಾಶಯಗಳು.
ನೀವು ಬರೆದ ಕವನದಲಿ ಅವರ ನಿಮ್ಮ ನಡುವಿನ ಮಧುರ ಭಾಂದವ್ಯದ ಒಡನಾಟದ ಬದುಕಿನ ಅವರೊಂದಿಗಿನ ಜೀವನ ತರಂಗಗಳು ಸುಂದರವಾದ ಪದಗಳಲಿ ಮೂಡಿಬಂದಿದೆ ಕವನ ಸುಂದರ ಭಾವನೆಯೊತ್ತ ಸಾಲುಗಳು.
ಶುಭವಾಗಲಿ ನಿಮ್ಮಿಬ್ಬರ ಬದುಕಿನ ಪಯಣದಲಿ ಸದಾ.
[4/12, 1:10 PM] Wr Pramila Chullikana: ಪ್ರೇಮ ಮೇಡಂ ರವರ "ಜೀವದ ಗೆಳೆಯ"ಕವಿತೆಯಲ್ಲಿ ನೀ ಬಾಳಲ್ಲಿರಲುಜೀವನದಲ್ಲಿ ಸಂತಸದ ಉದಯ. ನಿನ್ನೊಲುಮೆ ಧಾರೆ ಹರಿಸುತ್ತ ನೀ ಸದಾ ಪ್ರೀತಿಯಿಂದಿರು.. ನೋವಿನ ಅನುಭವವಾಗದೆ ಪ್ರತಿ ಕ್ಷಣವು ಆನಂದಮಯವಾಗಿ ಕಷ್ಟ ದೂರಾಗಿ ಸುಖ ಸಾಗರವಾಗಲಿ ಜೀವನ.. ದಿನಗಳು ಸಂತಸದಿ ಕಳೆಯುತ್ತಿರಲು ಜೀವನ ಜೋಕಾಲಿಯಂತೆ.. ಎಂದು ತನ್ನ ಜೀವನ ಗೆಳೆಯನಿಗೆ ಹುಟ್ಟು ಹಬ್ಬದ ಶುಭದಿನದಂದೇ ತನ್ನ ಮನದಾಳದ ಮಾತುಗಳನ್ನು ಪ್ರೇಮ ತುಂಬಿ ಕವಿತೆಯನ್ನಾಗಿಸಿದ್ದಾರೆ. ಸುಂದರವಾಗಿ ಮೂಡಿ ಬಂದಿದೆ ಶುಭ ಆಶಯವನ್ನೊಳಗೊಂಡ  ಕವಿತೆ
ಧನ್ಯವಾದಗಳು
[4/13, 6:19 AM] +91 84948 17130: *ಪ್ರೇಮ್ ರವರ ಗಝಲ್-80*

ಜೀವವರಿರದ ಬಂಡೆಗೂ ಜೀವ ಮೂಡುವ ಭಾವನೆ ತಂದಿರಿ ಮೇಡಮ್ ತಮ್ಮ ಈ ಕವನದಿಂದ. ಅದೆಂತಹ ಅದ್ಭುತ ಕಲ್ಪನೆ. ಮೆಚ್ಚಲೇಬೇಕು ತಮ್ಮ ಈ ಊಹಾ ಶಕ್ತಿಯನ್ನು.
ಯಾವ ಆಡಂಬರವೂ ಇಲ್ಲದೆ ನದಿಯ ನಡುವೆ ಮಲಗಿಹ ಬಂಡೆ, ಅದರ ಮೇಲೆ ಜನರ ಬಂದು ಹೋಗುಗಗಳ ನಡುವೆ ಸಂಭ್ರಮಾಚರಣೆ, ಮೋಜಿನಾಟಗಳಿಗೆ ಸಪೋರ್ಟ್ ಮಾಡುತ್ತ ತಾನೇ ಬಲಿಪಶುವಾದ ಮನಮುಟ್ಟುವ ಕವಿತೆ ಇದು.

ಗಿರಿಮನು.
[4/13, 6:33 AM] +91 70220 69778:  *ಕವಿಯತ್ರಿ* ಪ್ರೇಮ
              *ಗಝಲ್*
ಸುಂದರವಾದ ಕಲ್ಪನೆ
ಗಝಲ್ ನಲ್ಲಿ ಏನೇ ಬಂದರೂ ಅದನ್ನು ಸಹಿಸಿ ಎದುರಿಸಿ, ಕಷ್ಟ ಕ್ಕೆ ತಲೆಕೊಟ್ಟು ಮೌನದಿಂದ ದೂರ ವಿದ್ದು ಪ್ರೇಮವೇ ಕಾಣದ ವಿರಹಿ ನಾನೆಂದು ಬಂಡೆಯನ್ನು ಹೋಲಿಸಿ ಬರೆದು ಗಝಲ್ ಗೆ ಜೀವ ತುಂಬಿದ್ದಾರೆ ಚೆನ್ನಾಗಿದೆ.ಧನ್ಯವಾದಗಳು
[4/13, 3:49 PM] Wr Ravi Jadav Sonekavi: *ಪ್ರೇಮ್*
ಅವರೆ
ಈ ಕವಿತೆಯನ್ನು ಹೊರ ಮೈಯ ಅರ್ಥದಿಂದ ನೋಡಬಾರದು.
ಇದರ ಒಳ ಮೈಯ ಅರ್ಥಗಳನ್ನು  ಸೂಕ್ಷ್ಮವಾಗಿ ನೋಡಿದಾಗ ಅರಿವಾಗುವ ಸತ್ಯಗಳು ಕಲ್ಪನೆಗಳಿಗೂ ಮಿತಿಯಿಲ್ಲ.

ಈ ಗಜಲ್ ಹೊರ ಮೈ
ಬಂಡೆಯು ಸಹ ತನಗೆ ಸಡಗರ  ಸಂಭ್ರಮವನ್ನುಹೇಳಿಕೊಂಡು ಸಂತೋಷ  ಪಡುವ ಅಂತರಾಳ ಒಂದು ಕಡೆಯಾದರೆ

ಮತ್ತೊಂದು ಹೆಣ್ಣನ್ನು ಸಾಂಕೇತಿಕಸಿ ನೋಡುವುದಾದರೆ
ಅದರ ಒಳ ಮೈ ಹೆಣ್ಣಿನ ಸೂಕ್ಷ್ಮತೆಗಳನ್ನು ಹೇಳುವಂತಹ ಪರಿ ನನಗೆ ಅರಿವಾಗುವ ಹಾಗೆ ಇದೆ,

ಪ್ರೇಮ್ ಅವರೆ
ಹೊರ ಮೈಯ ಪರಿಭಾಷೆ
ಒಳ ಮೈಯ ಪರಿಕಲ್ಪನೆ
ಎರಡು
ಒಳಗೊಂಡ ನೋಡಬೇಕು..
ಎನ್ನುವ  ಸೃಜನಶೀಲತೆ ಕಾಡಿಸುವ ಪರಿಯೊಳಗೆ ನರ್ತಿಸುತಿದೆ.

ಧನ್ಯವಾದ.

*ಸೋನೆ*
[4/16, 8:11 AM] +91 87489 94250: ಪ್ರೇಮ್ ರವರ

ಬರಬೇಡ

ಕವನದ ಆಶಯ : ಹಾಸ್ಯದ ಮೂಲದ ಯಮರಾಜನಿಗೆ ಎಚ್ಚರಿಕೆ ನೀಡುತ್ತಾ ,  ಮನುಜನ ಗುಣಗಳನ್ನು ತಿಳಿಸುತ್ತಾ ; ಪರಿಸರ ಮಲಿನತೆಯಿಂದ ಮನುಜ ತಂತಾನೆ ಸಾಯುತ್ತಾನೆ. ನೀ ಬರುವುದೇ ಬೇಡ ಎಂಬ ವಿಶಾಲಾರ್ಥವನ್ನು ಹೊಂದಿದ್ದು ಪರಿಸರ ಮಾಲಿನ್ಯದಿಂದ ಮುಂದೊಂದು ದಿನ ನಮ್ಮ ಸಾವು ಎಂಬುದನ್ನು ತಿಳಿಸುತ್ತಾ ಮಾರ್ಮಿಕವಾಗಿ ಪರಿಸರ ಸಂರಕ್ಷಿಸಿ ಎಂದು ಕೂಗಿಹೇಳುವಂತಿದೆ ಕವನ

ಸತ್ತ ಮೇಲೆ ಮನುಜನ ಕರೆದೊಯ್ಯಲು ಯಮ ಬರುತ್ತಾನೆ ಎಂಬುದು ನಮ್ಮ ಕಲ್ಪನೆ. ಯಮಲೋಕದ ಚಿತ್ರಣ ಬೆಚ್ಚಿಬೀಳಿಸುವ ಭಾವನೆಗಳಾಗಿದ್ದು , ಇಂತಹ ಭಾವನೆಗಳನ್ನು  ಈಗ ಕಟ್ಟು ಕತೆಗಳಂತ ಮನುಜ ಸ್ವೀಕರಿಸಿದ್ದಾನೆ. ಇಂದಿನ ಹವಾಮಾನಕ್ಕೆ ತಕ್ಕಂತೆ ಮಾನವ ಬದಲಾಗಿದ್ದಾನೆ . ಹಣ ಕೊಟ್ಟು ನಿನ್ನನ್ನೇ ಮರುಳು ಮಾಡುವಷ್ಟರ ಮಟ್ಟಕ್ಕೆ ಮಾನವ ಬಂದಿದ್ದಾನೆ. ನೀನೂ ಬದಲಾಗಿ ಭೂಲೋಕಕ್ಕೆ ಹೆಜ್ಜೆಯಿಡು ಇಲ್ಲದಿದ್ದಲ್ಲಿ ನಿನಗೇ ಉಳಿಗಾಲವಿಲ್ಲ ಎಂಬ ಹಾಸ್ಯದ ತುಣುಕುಳೊಂದಿದೆ ಕವನ ಚೆನ್ನಾಗಿಮೂಡಿಬಂದಿದೆ .
ಪರಿಸರ ಸಂರಕ್ಷಣೆಯ ಆಶಯವನ್ನು  ಬಿತ್ತರಿಸುವಂತಿದೆ ಕವನ
ಧನ್ಯವಾದಗಳು
[4/16, 10:01 AM] +91 84948 17130: *ಪ್ರೇಮ ಮೇಡಮ್ ರ ಬರಬೇಡ ಕವನ*

ದಯವಿಟ್ಟು ಅಡ್ರಸ್ ಗೊತ್ತಿದ್ರೆ ಈ ಕವನವನ್ನು ಯಮನಿಗೆ ಪೋಸ್ಟ್ ಮಾಡಿ ಬಿಡಿ. ಪಾಪ, ಅವನೂ ಎಲ್ಲ ತಯಾರಾಗಿಯೇ ಬಂದು ಬಿಡಲಿ.

ಅವನಿಗೇನು ಗೊತ್ತು ಮನುಜನೆಷ್ಟು ವಿಷ ಜಂತುವಾಗಿದ್ದಾನೆ ಎಂದು. ಯಮಲೋಕವನ್ನೇ ಹಾಳುಮಾಡಿಬಿಡಬಹುದು ಈ ಕೆಟ್ಟ ಹುಳು.

ಅವನೂ ತಿಳಿದಿರಲಿ ನಮ್ಮ ಈ ಕೆಟ್ಟ ಉಪಟಳವ.

ಕವಿತೆ ಓದುತ್ತಿದ್ದರೆ ಪಾಪ ಅನಿಸುತ್ತದೆ ಯಮನನ್ನು ಊಹಿಸಿಕೊಂಡು..

-ಗಿರಿಮನು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ