ಕೊನೆಕ್ಷಣದಿ ನನ್ನ ನೆನೆದ ಪಪ್ಪ
ಒಂಭತ್ತು ತಿಂಗಳ ಬಸುರಿ ನಾನು
ಒಂಟಿಯಾಗಿ ಬಸ್ಸು ಹತ್ತಿ ಹೋಗುವ ಧೈರ್ಯವಿಲ್ಲ!
ಕನಸಲ್ಲಿ ಬಂದರು ಪಪ್ಪ!
ಪಾಪ, ತುಂಬಾ ಉಷಾರಿರಲಿಲ್ಲ ಅವರಿಗೆ!
ಕರೆದರು ಮಗಳನ್ನು! ಸಾಧ್ಯವಾದಷ್ಟು ಜೋರಾಗಿ,
ತನ್ನ ಶಕ್ತಿ ಮೀರಿ ಜೋರಾಗಿ ಕರೆಯುತ್ತಲೇ ಇದ್ದರು,
ಮೊದಲು ಜೋರಿದ್ದ ಶಬ್ದ ಕೊನೆಗೆ ನಿಧಾನವಾಗುತ್ತಾ ಬಂತು,
ಸ್ವರ ನಡುಗುತಲಿತ್ತು, ಕೊನೆಗೆ ಅದು ಇಲ್ಲವಾಯ್ತು!!!
ನಾನು ಎದ್ದೆ, ಅದು ನನ್ನ ಕನಸಾಗಿತ್ತು,
ಅಲ್ಲ, ಅದು ಕನಸಾಗಿರಲಿಲ್ಲ,
ನಿದ್ದೆಯಲ್ಲಿ ಕಂಡ ಸತ್ಯವಾಗಿತ್ತು!
ಅತ್ತು ಅತ್ತು ನನ್ನ ಕಣ್ಣುಗುಡ್ಡೆ ದೊಡ್ಡದಾಗಿತ್ತು!
ನಾನು ಅಸಹಾಯಕಳಾಗಿದ್ದೆ,
ಅಮ್ಮನಿಗೆ ಫೋನ್ ಮಾಡೋಣವೆಂದರೆ ನೆಟ್ವರ್ಕ್ ಸಿಗಲಿಲ್ಲ,
ಗಂಡನಿಗೆ ಫೋನ್ ಮಾಡಿ ಹೋಗಿ ಅಪ್ಪನನ್ನು ನೋಡಿ ಬರಲು ತಿಳಿಸಿದೆ!
ಮರುದಿನ ನನ್ನ ಸೀಮಂತ!
ಪಪ್ಪ, ಅಮ್ಮನಿಗೆ ಬರಲಾಗಲಿಲ್ಲ,
ನನ್ನನ್ನು ದೊಡ್ಡಮ್ಮನೊಡನೆ ಅಜ್ಜಿ ಮನೆಗೆ ಕರೆದುಕೊಂಡು ಹೋದರು!
ಅದರ ಮರುದಿನ ಪಪ್ಪನನ್ನು ನೋಡಲು ಕರೆದುಕೊಂಡು ಹೋಗುತ್ತೇನೆಂದರು ಮಾವ!
ಅವತ್ತೆ ರಾತ್ರಿ, ರಾತ್ರಿ ಹನ್ನೆರಡು ಗಂಟೆಗೆ ಬಾಗಿಲು ಬಡಿದ ಶಬ್ದವಾಯಿತು!
ಹಲವಾರು ದಿನಗಳಿಂದ ಉಷಾರಿಲ್ಲದ ಪಪ್ಪನ ಪ್ರಾಣ ಪಕ್ಷಿ ಹಾರಿ ಹೋಗಿತ್ತು!
ಕೊನೆಗೂ ಪಪ್ಪನನ್ನು ಜೀವಂತ ನೋಡಲು ಆಗಲೇ ಇಲ್ಲ!
ಆ ನೋವು ನನ್ನ ಸದಾ ಕಾಡುತ್ತಲೇ ಇದೆ..
ಇಂದು, ಈಗಲೂ, ಮುಂದೂ...
@ಪ್ರೇಮ್@
01.05.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ