ಉಪ್ಪಿಟ್ಟು
ದೂರ ನನಗೆ ತಿಂಡಿಗಳಲಿ ಉಪ್ಪಿಟ್ಟು
ಅಡ್ಡ ಹೆಸರದಕೆ ಇರಿಸಿಹರು ಕಾಂಕ್ರೀಟು!
ಅಮ್ಮ ಹೇಳುವರು "ತಿಂದಿಲ್ಲಾಂದ್ರೆ ಬೀಳುತ್ತೆ ಎರಡೇಟು"
ಹಾಸ್ಟೆಲಲ್ಲಂತೂ ಉಪ್ಪಿಟ್ಟಿನ ದಿನ ತುಂಬುತ್ತೆ ಹೊರಗಿಟ್ಟ ಬಕೇಟು!
ಕಡಲೆ ಬೇಳೆ, ಉದಿನ ಬೇಳೆಯ ಒಗ್ಗರಣೆ
ಅವರೆ ಕಾಳು, ನೆಲಗಡಲೆಯ ಸಿಂಪರಣೆ,
ಸಕ್ಕರೆ-ಬೆಲ್ಲ ಸೇರಿಸಿದ ಸೀಕರಣೆ
ಏನೇ ಆದರೂ ಮಾಡುವೆ ಉಪ್ಪಿಟ್ಟ ನಿರಾಕರಣೆ...
ಬೆಳಗಿನ ತಿಂಡಿಗೆ ಬೇಕು ಇಡ್ಲಿ, ದೋಸೆ, ರೊಟ್ಟಿ!
ಅಜ್ಜಿ ಮಾಡಿದ್ದು ರುಚಿ ಭತ್ತದ ಅಕ್ಕಿಯ ಕುಟ್ಟಿ!!
ಅಜ್ಜಿಯಡಿಗೆ ತಿಂದು ಬೆಳೆದ ನಾನೇ ಜಗಜಟ್ಟಿ!
ಏನಾದರೂ ಉಪ್ಪಿಟ್ಟ ಕಂಡರೆ ಓಡಲು ಕಾಲುಗಳಾಗುವುವು ಗಟ್ಟಿ!!
ಬೇಡಪ್ಪಾ ಬೇಡ ಉಪ್ಪಿಟ್ಟಿನ ಆಹಾರ!
ಅಂದೆಲ್ಲಾ ಸರಿಯಾಗಲ್ಲ ಬೆಳಗಿನ ಉಪಹಾರ!
ಮಾಡಹೊರಡುವೆನಂದು ಅಡಿಗೆ ಮನೆಯಲಿ ಅಮ್ಮನಿಗೆ ಸಹಕಾರ!
ಹೇಳಲೆಂಬಂತೆ ಉಪ್ಪಿಟ್ಟೆಂಬ ತಿಂಡಿಗೆ ನಕಾರ!!
ಓ ಉಪ್ಪಿಟ್ಟೇ ನಿನ್ನ ಕಂಡು ಹುಡಿದವನದೆಲ್ಲಿಹನು?
ಸುಲಭ ತಿಂಡಿಯೆಂದು ಮಡದಿಯ ತಲೆ ತುರುಕಿದವನು!
ರವೆಯ ಹುರಿದು ಮಾಡಲು ಸಲಹೆಯಿತ್ತವನು?
ಬರಗೊಡಲಾರೆ ಹತ್ತಿರ ಉಪ್ಪಿಟ್ಟೆಂಬ ತಿಂಡಿಯನು!!
@ಪ್ರೇಮ್@
18.04.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ