ಬದುಕಬೇಕು ಹೀಗೆ..
ನಾ ನಿನ್ನ ಪಾದದ ಧೂಳು
ಶಿವ ನಾ ನಿನ್ನ ಗುಲಾಮನಯ್ಯ//
ಪೊರೆದು ಕಾಪಾಡೊ ಕರುಣಾಮಯಿ ಎನ್ನ,
ಬಿಡಲಾರೆನು ಎಂದೂ ಪಾದವ ನಿನ್ನ//
ಮಳೆಯಲ್ಲು, ಬಿಸಿಲಲ್ಲು
ನೀನೆನ್ನ ಜತೆಗಿರುವೆ,
ಸುಖದಲ್ಲಿ ಸುಖನೀಡಿ, ಕಷ್ಟದಿ ಕಣ್ಣೀರ ಕೊಡುವೆ//
ಮನದಲ್ಲೆ ನಿನ್ನ ನೆನೆವೆ
ದೇಗುಲವ ಕಟ್ಟಲಾರೆ,
ನನ್ನ ಬಾಳಿಗೆ ಇರಲಿ ನಿನ್ನಮೊಲುಮೆ,
ನಿನ್ನ ನಾಮವು ಇರಲಿ ಮನದೊಳಗೆ//
ಶಿವನೇ ಭಯಹರನೆ, ಎಂಥ ಮೂರ್ಖನು ನೀನು!
ಹಸಿದವಗೆ ನೀರಡಿಕೆ, ಬಳಿ ಸಾಗಿದವಗೆ ಸಾಗರವು ನೀನು!!
ಒಲವಿಂದಲೆ ನೋಡುತ್ತಾ ಇರುವೆನು ನಾನಿಲ್ಲಿ...
ಬಲ ನೀನೇ ನನ್ನ ಬಾಳಿಗೆ
ಬಲವಿಲ್ಲದೆ ಏನ ಮಾಡುವೆ....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ