ಬದುಕು
ನಮ್ಮ ಬದುಕೊಂದು ರೈಲು ಬಂಡಿ,
ಸದಾ ಓಡುತಿರಬೇಕು ಜೀವ ಹಿಂಡಿ1೧1
ಹಲವರು ಬಂದು ಸೇರುವರು ಆಗಾಗ,
ಕೆಲವರು ನಿರ್ಗಮಿಸುವರು ಬಹುಬೇಗ1೨1
ಅಲ್ಲಲ್ಲಿ ನಿಲ್ಲುವುದು ಗಾಡಿ ವಿಶ್ರಾಂತಿಗಾಗಿ,
ಅಲ್ಲಿ ಅದು ಕಾಯುವುದು ಜನರ ಆಗಮನಕ್ಕಾಗಿ1೩1
ನವನವೀನ ಸ್ನೇಹಿತರು ಸಿಗುವರು ಹಲವರು,
ಕೋಪ,ದ್ವೇಷ,ಅಸೂಯೆ,
ಆಸೆ,ಪ್ರೀತಿ,ಸ್ನೇಹ ಕಲಿಸುವರು1೪1
ಇಂಜಿನ್ ನಂತೆ ಜೊತೆಯಾಗುವರು ಪಾಲಕರು,
ರಕ್ಷಣೆ,ಪೋಷಣೆ,ರಂಜನೆ ಒದಗಿಸುವರು1೫1
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ