ಗುರುವಾರ, ಡಿಸೆಂಬರ್ 7, 2017

60. 4. ಹನಿ ಕವನಗಳು

[8/29, 10:48 AM] Prem: ಮನದ ಮಾತು
ಕಣ್ಣಲ್ಲಿ ಬಂದಾಗ
ಕಣ್ಣೀರಾಯಿತು....
ಮುಖದಲ್ಲಿ ಬಿಂಬಿತವಾದಾಗ
ಮೌನವಾಯಿತು....

@ಪ್ರೇಮ್@

[8/29, 10:48 AM] Prem: ನನ್ನ ನಲ್ಲೆ
ನೀ ಎಲ್ಲೇ?
ನಾ ಇಲ್ಲೆ...
ಯಾಕೆ ಬರಲೊಲ್ಲೆ?
@ಪ್ರೇಮ್@

[8/29, 10:48 AM] Prem: ನಂಬಿಕೆಯೇ ಜನಮನ.
ನಂಬಿಕೆಯೇ ಬಹುಮಾನ.
ನಂಬಿಕೆಯೇ ಅಭಿಮಾನ
ನಂಬಿಕೆಯೇ ಜೀವನ.
@ಪ್ರೇಮ್@

[8/29, 10:48 AM] Prem: ಆತಿಥ್ಯ
ನೋಡಲು ಸುಮಧುರ.
ಮಾತಲಿ ವೈಯ್ಯಾರ..!
ಎದೆಯಲಿ ಬರಬರ
ಮೆಣಸಿನ ಉರಿಕಾರ!!!
@ಪ್ರೇಮ್@

[9/9, 11:16 AM] Prem: ಕೃಷಿ ಎಂಬ ಪದವೇ ಅರ್ಥಗರ್ಬಿತ. ಹೊಸತನ್ನು ಪರಿಸರದ ಸಹಾಯದಿಂದ ಬೆಳೆ, ತರು ಎಂಬ ಇಂಗಿತ. ಹೊಸತು ಎಂದ ಕ್ಷಣ ನಮ್ಮ ಮೈ,ಮನಸು ಪುಳಕಗೊಳ್ಳುತ್ತದೆ.ಕಿವಿ ಅರಳುತ್ತದೆ.ಉತ್ಸಾಹದ ಚಿಲುಮೆ ಪುಟಿಯುತ್ತದೆ.
ಸಾಹಿತ್ಯ ಕೃಷಿ ಇದರ ಒಂದು ಅಂಗ.ಬಂದ ಚಿಗುರನ್ನು ಚಿವುಟದೆ,ಸ್ವಲ್ಪ ಮಣ್ಣು,ಸ್ವಲ್ಪ ನೀರು ಹಾಕಿ ಬೆಳೆಯಲು ಸ್ಥಳವಿತ್ತರೆ ಸಾಕು,ಅದು ತಂತಾನೇ ಅಸ್ತಿತ್ವ ಕಂಡುಕೊಳ್ಳುತ್ತದೆ.
ವಾಟ್ಸಪ್ ಮತ್ತು ಫೇಸ್ ಬುಕ್ ನಲ್ಲೂ ಕವಿಮನಸುಗಳಿವೆ.ಅವು ಒಂಟಿಯಾಗೋ,ಗುಂಪಿನಲ್ಲೋ ಚಿಗುರುಗಳಿಗೆ ನೀರು,ಮಣ್ಣು,ಗೊಬ್ಬರ ಹಾಕಿ ಬೆಳೆಸುತ್ತಿವೆ.ಇದು ಸ್ವಾಗತಾರ್ಹ ಬೆಳವಣಿಗೆ.
  ಮಾಹಿತಿ ತಂತ್ರಜ್ಞಾನ,ಅದರ ಉಪ ಉತ್ಪನ್ನಗಳು ಇಂದಿನ ಯುವ ಜನಾಂಗವನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂಬ ಮಾತು ಇಂದು ಎಲ್ಲೆಡೆ ಕೇಳಿ ಬರುತ್ತಿರುತ್ತಿರುವ ಈ ದಿನಗಳಲ್ಲೇ ಸದ್ದಿಲ್ಲದೆ ಸಾಹಿತ್ಯ ಕೃಷಿ ಬೆಳೆಯುತ್ತಿದೆ ಎನ್ನುವುದಕ್ಕೆ 'ಭಾವದೀಪ್ತಿ' ಕವನ ಸಂಕಲನವೇ ಸಾಕ್ಷಿ.
    ವೈಜ್ಞಾನಿಕ ತಂತ್ರಜ್ಞಾನದ ಬೆಳವಣಿಗೆ,ಅದರ ಮಕ್ಕಳಾದ ವಾಟ್ಸಪ್,ಫೇಸ್ ಬುಕ್ ಇವುಗಳನ್ನು ನಮ್ಮ ಯುವ ಮನಸುಗಳು ಸರಿಯಾಗಿ ಬಳಸಿಕೊಂಡಲ್ಲಿ ಸಾಹಿತ್ಯ ಕೃಷಿ ಮೇರು ಪರ್ವತಕ್ಕೇರುವಲ್ಲಿ ಎರಡು ಮಾತಿಲ್ಲ.ನೀವೇನಂತೀರಿ?
@ಪ್ರೇಮ್@

[10/2, 3:16 PM] Prem: *ಯೋಧ*
ನೀ ನೆಲದ ಉಸಿರು
ನೀ ತಾಯ ಹಸಿರು.
ನೀ ದೇಶದ ನಾಡಿ
ನೀ ಕಾಯುವೆ ಗಡಿ.

ದೇಶದ ಬಡಿತ ನೀ
ಆತ್ಮದ ತುಡಿತ ನೀ
ಮಂಜಿನ ಹನಿಯು ನೀ
ದಿವ್ಯ ಪ್ರಭೆಯು ನೀ.

ತನ್ನ ನೆತ್ತರ ಹರಿಸಿ,
ಪರರ ಒಲುಮೆಯ ಹರಸಿ
ಜೀವನವನೆ ಮುಡಿಪಾಗಿಸಿ
ದೇಹವ ಭೂತಾಯಿಗಾಗಿ ಕರಗಿಸಿ,

ತನ್ನತನವ ಮರೆತು,
ತನ್ನವರ ದೂರ ತೊರೆದು
ಜನನಿಗಾಗಿ ಕಾದು
ಶತೃವನು ತೇದು

ತನ್ನ ಬದುಕನು
ತಾಯಿಗರ್ಪಿಸಿಹನು
ಬಲಿಷ್ಠನಾದವನು
ನಮಗಾಗಿ ಗುಂಡಿಗದೆ ಕೊಡುವವನು

ಓ ಧೀರ ಯೋಧರೇ
ನಮ್ಮ ಕಾಯ್ವ ಸಹೋದರರೇ
ನಿಮಗಿದೋ ಅಂತರಾಳದ
ಶುಭ ಹಾರೈಕೆಗಳು.

@ಪ್ರೇಮಾ@

[10/6, 12:05 PM] Prem: *ನಾನೇ ತೋರಣ*
ಭೂಮಿಯ ಬಣ್ಣವ ಧರಿಸಿಹೆ ನಾನು,
ಹೇಳುವೆ ಉಳಿಸಿ ನೈಜ ಹಸಿರನು.

ಮುನುಜನೆ ಕಟ್ಟಿ ಅವನೆ ಬಿಚ್ಚುವನು
ಹಸಿ ಹಸಿ ಮಾವಿನ ಎಲೆಗಳನು.

ನಾ ಬಯಸುವೆ ಕೇವಲ ನೂಲನ್ನು,
ಒಟ್ಟಿಗೆ ಬಂಧಿಸಿ ಬಿಡುವೆ ಎಲೆಗಳನು.

ತಳಿರಾಗಿಹ ನಾ ಹೇಳುವೆ ಗುಟ್ಟೊಂದನ್ನು,
ಪಾಲಿಸಿರೆಂದೂ ನಿಮ್ಮಲಿ ಒಗ್ಗಟ್ಟನ್ನು.

ಯಾರನೂ ಜರಿಯದೆ 'ಅನರ್ಹನು'
ಎಂದು,ನೋಡಿರಿ ನನ್ನಯ ಸ್ಥಾನವನು.

ನಾ ಹಸಿರ ತೋರಣ ಹೇಳುವೆ-ತನು-
ಮನದಿ ಪೂಜಿಸಿರಿ ಪರಿಸರವನು.

ಕಲಿಯಿರಿ ನನ್ನಿಂದ,ನೋಡಿರಿ ನನ್ನನು
ರಕ್ಷಿಸಿ ಗಿಡ-ಮರ-ಬಳ್ಳಿಯನು.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ