*ಮಗಳಿಗೆ*
ಹೆಣ್ಣಾಗಿಹೆನಂದು ಕೊರಗದಿರು ಮಗಳೇ,
ಹುಡುಗನಿಗಿಂತ ಕಡಿಮೆಯಿಲ್ಲದಂತೆ ಬೆಳೆಸಿಹೆವು ನಿನ್ನ..
ಮಾತಿನಲಿ ಮಾತ್ರವಲ್ಲ,ಧೈರ್ಯದಲಿ ಬೇಕು,
ಅದ ಬೆಳೆಸಿಹೆವು ನಿನ್ನಲಿ,ನಿನಗೆ ನೀನೇ ರಕ್ಷೆ.
ಎದೆಗುಂದದಿರು ಎಂದಿಗೂ,ಮರೆಯದಿರು ಮನವ,
ಹೃದಯದ ಮಾತು ಕೇಳು, ಬುದ್ಧಿ ಬಳಸು,
ತಿಳಿದುಕೋ ಎಂದೂ,ಶಕ್ತಿಗಿಂತ ಯುಕ್ತಿ ಮೇಲು..
ಯಾರೇ ಎದುರಾಗಲಿ,ದರ್ಪ ಬೇಡ,
ಪ್ರೀತಿಗೆ ಸೋಲದವರಿಲ್ಲ, ಸೋತು ಗೆಲ್ಲಲು ಕಲಿ,ಮಾಡಿ ತಿಳಿ..
ಕೈ ಕೆಸರಾದರೆ ಬಾಯಿ ಮೊಸರು, ದುಡಿಮೆ ಕಲಿ,
ಒಳ್ಳೆ ಬುದ್ಧಿ,ಒಳ್ಳೆ ಗುಣವದು ದೇವರ ಹರಕೆಯ ಫಲ...
ಬೆಳೆಸಿಕೊ ಮನವ, ದುರಾಸೆ ಬೇಡ ಧನಕೆ,
ಬದುಕಲು ಕಲಿ,ಬದುಕಿದು ದೇವರ ಹರಕೆ...
@ಪ್ರೇಮ್@
08.12.17
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ