ಶನಿವಾರ, ಡಿಸೆಂಬರ್ 9, 2017

31. ಕವನ-ಧರಣಿಗೆ ಶರಣು

*ಧರಣಿಗೆ ಶರಣು*
ಹಸಿರ ಸೀರೆಯುಟ್ಟು, ಕೇಸರಿ ಹಣೆಯ ಬೂಟ್ಟು,
ತಿಳಿ ನೀರ ನದಿಯಲಿ ಪಾದ ತೊಳೆದಿಟ್ಟು,
ನಾದ ನಿನಾದಕ್ಕೆ ಪಕ್ಷಿ ಕಲರವ ಗಾನ,
ನೆಮ್ಮದಿ ಬೇಕೆಂದರೆ ಕಾನನದ ನೀರವ ಮೌನ//

ಹರಿವ ತೊರೆ,ಜಲಪಾತದ ತಳುಕು,
ಕೊರೆವ ಚಳಿ, ಋತುಗಳ ತಿರುಗುವ ಝಳಕು..
ಕುಸುಮಗಳಂದ, ನೋಟದುದ್ದಕ್ಕೂ ಸಾಲದು,
ಅಂದ ವರ್ಣಿಸಲು ಈ ಜೀವನವೇ ಸಾಲದು//

ಚೆಲುವೆ ಧರಣಿ, ಸರ ಪಕ್ಷಿಗಳ ಸಾಲು,
ಬರುವ ಸೂರ್ಯ ನಿನ್ನ ನೋಡಲು ದಿನಾಲು,
ಮರ,ಬಂಡೆ, ಕಡಲ ರಾಶಿ ನಿನಗವೆ ಕಾವಲು,
ದಾರಿ ದೂರವದು ನಿನ್ನ ನೂಲು...//

ರಂಗಿನಾಟ ಪಶು-ಪಕ್ಷಿ-ಪ್ರಾಣಿ ಕೀಟಕೆ,
ಮೋಜಿನಾಟ ಮಾನವ ಜನ ಕುಲಕೆ,
ಧರಣಿ ಮಾತೆಯೇ ನಿನ್ನೊಲವಿಗೆ,ಗೆಲುವಿಗೆ ಶರಣು,
ಸಾಲವು ನೋಡಿ ಸವಿಯಲು ನನ್ನೆರಡು ಕಣ್ಣು....//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ