*ಚುಟುಕುಗಳು*
*೧ ಮಾನವತೆ*
ಸ್ವಚ್ಛಂದದಿ ಹಾರಿಸಿ ಬಿಡು
ಮಾನವತೆಯ ಹಕ್ಕಿಯ
ಸ್ವಾರ್ಥದ ಪಂಜರದೊಳು
ಬಂಧಿಯಾಗಿಸದೆ ...
ವಾಹ್... ಈ ಪುಟ್ಟ ಪುಟ್ಟ ಮಹಾನ್ ಸಾಲುಗಳು ನನ್ನನ್ನೂ ಚಿಕ್ಕದಾಗಿ ಬರೆಯುವಂತೆ ಪ್ರೇರೇಪಿಸಿದ್ದು. 'ಮಾನವತೆಯ ಹಕ್ಕಿ' ,'ಸ್ವಾರ್ಥದ ಪಂಜರ' ಎಲ್ಲಿಂದೆಲ್ಲಿಯ ಕವಿಯ ಹೋಲಿಕೆ! ಗ್ರಹಿಸಲಸಾಧ್ಯ ಸಾಮಾನ್ಯ ಮನಸಿಗೆ.... ಈ ರೂಪಕಗಳನ್ನಿತ್ತ ಕವಿಗಿದೋ ನಮನ.ಸೂಪರ್...
*೨ ಒಲವು*
ನಿನ್ನೊಲವ ಮಂದಿರದಿ
ನಾ ನಿನ್ನ ಮಹಾರಾಣಿ ...
ನನ್ನ ನೆನಪಿನ ಪಂಜರದಿ
ನೀನೆನ್ನ ಸೆರೆಯಾಳು ...
ನಿಮ್ಮ imagination
ತಂಬಾ ಇಷ್ಟ. ಒಲವ ಮಂದಿರ,ನೆನಪಿನ ಪಂಜರ....ರೂಪಕಗಳು ಕವಿಮನಸಿಗೆ ಕವಿಯೇ ಸಾಟಿ ಎಂಬುದನು ಮತ್ತೊಮ್ಮೆ ರುಜುವಾತುಗೊಳಿಸಿದಂತಿವೆ! ಸಣ್ಣ ಸಾಲಲ್ಲೆ ಒಲವ ಒರತೆ ಉಕ್ಕಿ ಹರಿದಿದೆ !!
*೩ ತೃಪ್ತಿ*
ನಿನ್ನೊಲವ ಕನಸಲಿ ಕಟ್ಟಿದ
ಹಕ್ಕಿ ಗೂಡೇ ಸಾಕೆನಗೆ ಇನಿಯ
ಪ್ರೀತಿ ಇರದ ಚಿನ್ನದ ಪಂಜರದಲಿ
ಬಂಧಿಯಾಗುವುದಕ್ಕಿಂತ ...
ಪ್ರೀತಿಗಿಂತ ಯಾವುದೂ ಮಿಗಿಲಲ್ಲ ಎಂದು ಈ ರೂಪಕ ಸಾಲುಗಳು ಸಾರಿ ಹೇಳುತ್ತವೆ... ಪ್ರೀತಿಯ
ಕನಸ ಹಕ್ಕಿಗೂಡು ಚಿನ್ನದರಮನೆಗಂತ ಲೇಸು ಎಂದಾಗ ಬೇಂದ್ರೆಯವರ 'ನಾನು ಬಡವಿ ಆತ ಬಡವ
ಒಲವೆ ನಮ್ಮ ಬದುಕು...
ಬಳಸಿಕೊಂಡೆವದನೆ ನಾವು
ಅದಕು ಇದಕು ಎದಕು.."
ಈ ಗೀತೆಯನ್ನು ನೆನಪಿಸಿತು...
@ಪ್ರೇಮ್@
*ಸುಧಾ ಎನ್. ತೇಲ್ಕರ್*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ