ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ
ನಮ್ಮ ದೇಶವು ಮುಂದುವರೆಯುತ್ತಿರುವ ದೇಶವೇ ಆದರೂ 21ನೇ ಶತಮಾನದಲ್ಲಿ ಎಲ್ಲರೂ ಮುನ್ನುಗ್ಗುತ್ತಿದ್ದಾರೆ. ಮಹಿಳೆಯರ ಓಟವೂ ಕಡಿಮೆಯಿಲ್ಲ. ಕೂಡು ಕುಟುಂಬ ಕಡಿಮೆಯಾಗುತ್ತಾ ಬಂದಂತೆ ಮನೆಯಲ್ಲಿನ ಸದಸ್ಯರ ಸಂಖ್ಯೆಯೂ ಕ್ಷೀಣಿಸುತ್ತಾ ಬಂತು.ಆಗ ಅಲ್ಲಿದ್ದ ಪ್ರತಿಯೊಬ್ಬರಿಗೂ ಜವಾಬ್ದಾರಿ ಹೆಚ್ಚುತ್ತಾ ಹೋಯಿತು. ಉದ್ಯೋಗಂ ಪುರುಷ ಲಕ್ಷಣಂ ಎಂಬ ಗಾದೆ ವಿಸ್ತರಿಸಿ ಮನೆಯ ಹಾಗೂ ಹೊರಗಿನ ಕೆಲಸಗಳ ಹೊರೆ ಮಹಿಳೆಗೂ ಬಂತು.
ಅಲ್ಲಿಂದ ಮಹಿಳೆ ಹಿಂದೆ ನೋಡಲಿಲ್ಲ. ತನಗೆ ಬಂದ ಜವಾಬ್ದಾರಿಗಳನ್ನು ಚಾಚೂ ತಪ್ಪದೆ ನಿರ್ವಹಿಸತೊಡಗಿದಳು. ವೇಗದ ಓಟಕ್ಕಾಗಿ ಸ್ಕೂಟರ್,ಕಾರ್,ಜೀಪ್,ಬೈಕ್ ಗಳು ಮಹಿಳೆಯರಿಗೂ ಬಂದವು. ಪುರುಷರದ್ದೆ ಅನ್ನಿಸಿಕೊಂಡಿದ್ದ ಡ್ರೈವರ್,ಕಂಡಕ್ಟರ್ ಕೆಲಸಗಳೂ ಮಹಿಳೆಯರದ್ದಾಗಿ, ಯಾವುದೇ ಕ್ಷೇತ್ರವನ್ನೂ ನಿಭಾಯಿಸುವ ಚಾಕಚಕ್ಯತೆ ತನ್ನಲ್ಲಿದೆ ಎಂದು ಆಧುನಿಕ ಮಹಿಳೆಯರು ತೋರಿಸಿಕೊಟ್ಟರು.
ಯಾವುದೇ ಕಂಪನಿ,ಕಛೇರಿ ಮಹಿಳೆಯರಿಂದಲೂ ನಡೆಯುತ್ತದೆ ಈಗ. ನಮ್ಮ ಮನೆ ಹಾಗೂ ನಮ್ಮ ದೇಶ ನಮ್ಮದೇ ಕೈಯಲ್ಲಿದೆ ಈಗ. ನೀವೇನಂತೀರಿ?
@ಪ್ರೇಮ್@
ಶುಕ್ರವಾರ, ಡಿಸೆಂಬರ್ 1, 2017
57. 7.ವಾರದ ಲೇಖನ 'ನಮ್ಮ ಬಂಟ್ವಾಳ' ದಲ್ಲಿ "ಸ್ತ್ರೀ ಶಕ್ತಿ ದೇಶಕ್ಕೆ ಮುಕ್ತಿ"
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ