ಗುರುವಾರ, ಡಿಸೆಂಬರ್ 28, 2017

23. ಕವನ -ಸಾಗರ

ಕವನ
ಸಾಗರ

ಜಗತ್ತಿನ ನೀರೆಲ್ಲವನು ತನ್ನಲಿರಿಸಿಕೊಂಡಿರುವೆ,
ಏಳು ಬೇರೆ ಬೇರೆ ಹೆಸರ ಕಟ್ಟಿಕೊಂಡಿರುವೆ.
ಗಗನದ ರಂಗಿನಾಟವ ಪ್ರತಿಬಿಂಬಿಸುವೆ,
ಖಂಡಗಳ ಒಂದೊಂದಾಗಿ ಜೋಡಿಸುವೆ//೧//

ಜಲ ಸಾರಿಗೆಗೆ ನಾನೇ ಮೂಲ,
ಜಲ ಸಂಪತ್ತಿಗೂ ನಾನೇ ಜಾಲ,
ಮಲಿನಗೊಳಿಸಿ ಮುಗಿಸದಿರಿ ನನ್ನ ಕಾಲ,
ನೆನಪಿಡಿ, ಜಲವಿಲ್ಲದೆ ಬದುಕೇ ಇಲ್ಲ! //೨//

ಹಲ ಜೀವಿಗಳಿಗೆ ನಾನಲ್ಲವೆ ಆಸರೆ?
ಕೆಲ ಮಾನವರೆ ಬತ್ತಿಸದಿರಿ ಕೊಳ-ಕೆರೆ!
ನನ್ನಿಂದಲೆ ಭೂ ತಾಯಿಗೆ ನೀಲಿ ಸೀರೆ,
ಕೊಳ್ಳಲಾರಿರಿ ನೀವ್ ಸಾಗರವ ಕಾಸಿರೆ?//೩//

ರಕ್ಷಿಸಿರಿ ನೆಲ,ಬೆಳೆ, ಮರ ಜಲವ,
ಸುರಿಯದಿರಿ ತರತರ ರಾಸಾಯನಿಕವ!
ತುರುಕದಿರಿ ನನ್ನೊಡಲಿಗೆ ನಿಮ್ಮಯ ಕಸವ,
ಬದುಕಿರಿ ಹಾಯಾಗಿ ಶುಚಿಯಾಗಿರಿಸಿ ಪರಿಸರವ.//೪//
@ಪ್ರೇಮ್//

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ