ಗುರುವಾರ, ಡಿಸೆಂಬರ್ 7, 2017

34. ಕವನ-ದೀಪಾವಳಿ

ದೀಪದಿಂದ ದೀಪ ಹಚ್ಚು,
ತೊರೆ ಮನಸಿನ ಕಿಚ್ಚು1ಪ1

ಇರಲಿ ಮನೆ-ಮನ ಸ್ವಚ್ಛ,
ಮಾಡದಿರು ಯಾರನೂ ತುಚ್ಛ1೧1

ರಂಗೇರಲಿ ಹಬ್ಬದ ದಿರಿಸು,
ತರಲಿ ಬಾಳಿಗೆ ಹುಮ್ಮಸ್ಸು1೨1

ಸುಡದಿರೋಣ ಧನವ ಪಟಾಕಿಯಲಿ,
ಮಾಡೋಣ ಹಬ್ಬವ ಸಂತಸದಲಿ1೩1

ದೀಪಗಳು ಬೆಳಗಲಿ,
ಸಂತಸವ ಸಾರಲಿ1೪1

ಹಬ್ಬದ ಉತ್ಸಾಹ ಪುಟಿಯಲಿ,
ಮೈಮನ ಪುಳಕಗೊಳ್ಳಲಿ1೫1

ನಿಮ್ಮ-ನಮ್ಮ ಎಲ್ಲರ ಬಾಳಲ್ಲಿ,
ಸದಾ ಆನಂದ ಚಿಮ್ಮಲಿ1೬1

ನಿಮಗಿದೋ ದೀಪಾವಳಿ
ಹಬ್ಬದ ಶುಭಾಶಯಗಳ ಸುರಿಮಳೆ, ಖುಷಿಯಾಗಿರಿ.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ