ಶುಕ್ರವಾರ, ಡಿಸೆಂಬರ್ 1, 2017

61. ನ್ಯಾನೋ ಕತೆ

ನ್ಯಾನೋ ಕತೆ
1. ವಿಧಿ
"ನನ್ನ ಅಮ್ಮ ಒಪ್ಪಲಿಲ್ಲ,ನನಗೆ ನೀನು ಬೇಡ" ಎಂದು ಮುಖಕ್ಕೆ ಹೊಡೆದವನ ಹಾಗೆ ಹೇಳಿ ಹೋಗಿದ್ದ ನಾಲ್ಕು ವರ್ಷಗಳಿಂದ ಪ್ರೀತಿಯಲ್ಲಿದ್ದ ಹುಡುಗ. ಇನ್ನೇನು ಯಾರೂ ಗತಿಯಿಲ್ಲ,ಕೆರೆನೋ,ಬಾವಿನೋ ನೋಡಬೇಕೆಂದುಕೊಂಡು ಮನೆಗೆ ಬಂದ ರಾಧಾಗೆ ಅಮ್ಮ ಒಂದು ಪತ್ರ ಕೈಗಿತ್ತರು. 'ತಗೋ ಯಾರೋ ನಿನ್ಮ ಫ್ಯಾನ್ ಇರಬೇಕು' ಎಂದರು.
  ಒಡೆದು ಪತ್ರ ಓದಿದ ರಾಧಾಳ ಜಗತ್ತೆ ಬೇರೆಯಾಗಿತ್ತು. ಅವಳ ಕತೆಯೊಂದನ್ನು ಮಾಸಿಕವೊಂದರಲ್ಲಿ ಓದಿ ಅವಳ ವಿಳಾಸ ಪಡೆದ ಅವಳ ಬಾಲ್ಯದ ಗೆಳೆಯನೊಬ್ಬ ಪತ್ರ ಬರೆದು ತನ್ನ ಬದುಕಿಗೆ ಜೊತೆಯಾಗುವಂತೆ ಅಂಗಲಾಚಿದ್ದ.ಈಗ ಯೋಚಿಸುವ ಸರದಿ ರಾಧಾಳದಾಗಿತ್ತು.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ