ಶುಕ್ರವಾರ, ಡಿಸೆಂಬರ್ 29, 2017

15.7 ಹನಿಗಳು/ಶಾಯರಿಗಳು-ಹೃದಯ

ಶಾಯರಿಗಳು/ಹನಿಗವನಗಳು
ಹೃದಯ
1. ಹೃದಯ ಹಾಡುತಿದೆ
    ಮನಕೆ ಸಂತಸವಾದಾಗ,
    ಹೃದಯ ಅಳುತಲಿದೆ
    ಮನವು ಬೇಸರದಿ ಕುದಿವಾಗ..

2. ಅಂದು-"ನೀ ನನ್ನ ಹೃದಯ
ನನ್ನ ಪ್ರೀತಿಯ ಇನಿಯ!"
ಇಂದು-"ನೀ ದೂರ ಹೋಗುವೆಯ?
ನನಗಿಹನು ಬೇರೆ ಗೆಳೆಯ!!"

3. ಹೂವಿನ ಹೃದಯ
ಬೇಕೆಂದಿತು ದುಂಬಿ!
ಸ್ವಾಗತಿಸಿತು ಹೂವು
ಮೈಮನದುಂಬಿ!!
ಕಾಯಾಯಿತು, ಹಣ್ಣಾಯಿತು!
ಜೀವನ ಫಲಿಸಿತು!

4.ಮನದ ಮಾತಿಗೆ
ತಲೆದೂಗಿತು ಹೃದಯ!
ಮನದ ಭಾಷೆಗೆ
ದನಿಯಾಯಿತು ಹೃದಯ!!

5. ಮಾತು ಮರೆತು
ಮೌನವಾದೆಯಾ ಹೃದಯ?
ಎನ್ನೆದೆ ಗೂಡಲಿ ಬಚ್ಚಿಟ್ಟ
ಭಾವನೆಗಳ ಬಿಚ್ಚಿ
ಸ್ವರ ಸಹಿತ ಹಾಡುವೆಯಾ?

6. ಕೋಗಿಲೆ ನೀ ಹಾಡು
ಬಿಚ್ಚಿಟ್ಟು ನಿನ್ನೆದೆಯಾ?
ನಾ ಆಲಿಸಿ ತಲೆದೂಗುವೆ,
ಮೆಚ್ಚಿ ನನ್ನ ಹೃದಯಾ!

7. ಬಲು ಕಷ್ಟ ಕಾಪಾಡಲು
ಈ ನನ್ನ ಹೃದಯ!
ಮೊದಲೇ ಅದ ಕದ್ದಿಹನು
ಈ ನನ್ನ ಇನಿಯ

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ