ನಾನೇಕೆ...
ನಾನೇಕೆ ಸೂತಕದ ಹಕ್ಕಿ?
ನನ್ನನೇಕೆ ಬೈಯುವರು ಹೆಕ್ಕಿ!
ಇತರ ಪಕ್ಷಿಗಳಂತೆ ನಾನಲ್ಲವೇ?
ನನ್ನ ಕೂಗದು ಜೋರಲ್ಲವೇ?
ನನಗಾಗಿ ನಾನೇನು ಮಾಡಿಲ್ಲ.
ಮರ ಕೊರೆವ ಹುಳ ತಿನ್ನುವೆನಲ್ಲ..
ಮರವ ಬದುಕಿಸಿ ಹೊಟ್ಟೆಹೊರೆವೆ
ಹಾಡಿದೊಡನೆ ನೀ 'ರಾಮಾ' ಎನುವೆ?
ನಾ ಹಾಡಿದೊಡೆ ಕೆಟ್ಟ ಸುದ್ದಿಯೇ?
ಕೋಳಿ ಕೂಗಲು ನಿತ್ಯ ಬೆಳಕಲ್ಲವೇ..
ಕೂಗು ನನ್ನದು ಹೇಗದು ಕೆಟ್ಟದು..
ಹಾಡುವ ಸ್ವಾತಂತ್ರ್ಯ ನನಗಿಲ್ಲವೇ..
ಕಾಗೆಯದು ಬಂದರೂ ಕೆಟ್ಟದೆನುವರು
ಸಮಾಜದ ಕಸವ ಶುದ್ಧೀಕರಿಸುವುದಲ್ಲ?
ನಾವು ನಿಮ್ಮಷ್ಟು ಕೆಟ್ಟವರಲ್ಲ ಮನುಜ
ಪರಿಸರದ ಅಸಮತೋಲನ ಮಾಡುವುದಿಲ್ಲ...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ