ಶುಕ್ರವಾರ, ಫೆಬ್ರವರಿ 2, 2018

100. ಕವನ -ನಲಿವಿರಲಿ ಬಾಳಿನಲಿ

ನಲಿವಿರಲಿ ಬಾಳಿನಲಿ

ನಸುನಗುವಿರಲಿ, ತುಸು ನಗೆಯಿರಲಿ
ಮಾಡುವ ಕಾರ್ಯದಿ ಖುಷಿಯಿರಲಿ
ಕುಟುಂಬದಿ ಸಮರಸವಿರಲಿ
ಬಾಳಿನಲಿ ನಲಿವಿರಲಿ//

ಬದುಕು ಬಂಗಾರವಾಗಿರಲಿ
ನಿತ್ಯ ನೂತನ ಶೈಲಿಯಿರಲಿ
ಮನದಲಿ ನೆಮ್ಮದಿಯಿರಲಿಬ
ಬಾಳಿನಲಿ ನಲಿವಿರಲಿ//

ಮಾಡಿದ ಕಾರ್ಯದಿ ತೃಪ್ತಿಯಿರಲಿ
ದುಡಿತದ ವಿಚಾರದಿ ಸಂತಸವಿರಲಿ
ಬದುಕಿನ ಆಟದಿ ತಾಳ್ಮೆಯಿರಲಿ
ಬಾಳಿನಲಿ ನಲಿವಿರಲಿ//

ದೇವರ ರಕ್ಷಣೆ ಜೊತೆಗಿರಲಿ
ಹಿರಿಯರ ಬಗ್ಗೆ ಗೌರವ ಇರಲಿ
ಬದುಕಿನ ಮೇಲೆ ಪ್ರೀತಿಯಿರಲಿ
ಬಾಳಿನಲಿ ಸದಾ ನಲಿವಿರಲಿ//
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ