ನನಗೂ ಬದುಕಲು ಬಿಡಿ
ಕಾಣುತ್ತಿಲ್ಲವೇ ಇಲ್ಲಿ
ನನಗೂ ಜೀವವಿದೆಯಿಲ್ಲಿ,
ಬದುಕಲು ಹಕ್ಕಿಲ್ಲವೇ ಇಲ್ಲಿ
ಹೇಳಬಲ್ಲವರು ಹೇಳಿ...
ಹಸಿರ ಚಾದರ ಹೊದ್ದು,
ನೇಸರನ ಕಿರಣಗಳ ತಡೆದು
ನೆರಳನೆಲ್ಲರಿಗೆ ಪಸರಿಸುತ್ತಿದ್ದು,
ಹಣ್ಣು,ಹೂಗಳ ನೀಡುತಿದ್ದು...
ಯಾರಿಗೂ ನೋವು ಕೊಡದೆ
ನನ್ನಷ್ಟಕೆ ಬದುಕುವವ ನಾನು,
ಆದರೂ ಬದುಕ ಬಿಡದೆ
ಕಡಿದು ಕೊಲ್ಲುವವ ನೀನು...
ಸಿಗುವುದೆಲ್ಲವ ಪಡೆದು ಮೊಗೆದು
ಉಂಡ ಮನೆಗೆ ದ್ರೋಹ ಬಗೆದು
ನನ್ನ ಕೈ-ಕಾಲು ಕಡಿದು ತೆಗೆದು
ಎಲೆ ಮಾನವ ಬಾಳು ಹಿರಿದು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ