ಮಂಗಳವಾರ, ಫೆಬ್ರವರಿ 20, 2018

125. ಕವನ-ಅಪ್ಪ

1. ತಂದೆ ನೀ ನನ್ನ ತಂದೆ

ಓ ನನ್ನ ಪ್ರೀತಿಯ ತಂದೆ ನೀ..
ಈ ಜಗಕೆ ನನ್ನ ತಂದೆ ನೀ..

ತಾಯಿ ಹೆತ್ತು, ನೀನು ಹೊತ್ತು
ಬದುಕ ಭಾರವೆಲ್ಲ ಹೊತ್ತು
ಅಮ್ಮ ಮುತ್ತು, ನೀನು ತುತ್ತು
ನಿನ್ನ ಬಗ್ಗೆ ನನಗೆ ಗೊತ್ತು...

ಮಗಳ ಬಗ್ಗೆ ನಿನಗೆ ಇಷ್ಟ
ನನಗೆ ನಿನ್ನ ಕೋಪ ಕಷ್ಟ
ನೀನಿಲ್ಲದಿರೆ ಬದುಕು ನಷ್ಟ
ನಿನ್ನ ಸೇವೆ ಮಾಡಲು ಇಷ್ಟ..

ಅಪ್ಪ ಎನುವ ಮಾತು ಚಂದ
ಅಮ್ಮನಂತೆ ನೋಟ ಅಂದ
ನಿನ್ನ ಮಧುರ ಮಾತು 'ಕಂದ'
ಬಿಡಿಸಲಾರರು ಯಾರೂ ನಮ್ಮ ಬಂಧ..

ಪಪ್ಪ ನಿಮ್ಮ ಮೌನ ಸೀಕ್ರೆಟ್!
ನಿಮ್ಮ ಗಿಫ್ಟ್  ನನಗೆ ಗ್ರೇಟ್!
ನೀವು ನಮ್ಮ ರಕ್ಷಣಾ ಗೇಟ್..
ನಿನ್ನಿಂದಾಗಿ ಇದೆ ನನ್ನ ಸೀಟ್..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ