1. ನೇಸರ
ಬೆಳಗಿನ ಬಾನಲ್ಲಿ ನೇಸರ ಬಂದ
ಬೆಳಕನು ಭೂಮಿಗೆ ಹೊತ್ತು ತಂದ//
ನಭದಲ್ಲಿ ಪಕ್ಷಿಗೆ ಹಾರಾಡೆಂದ,
ನವೀನ ದಿನದ ಆರಂಭ ತಂದ,
ನಮಗೆಲ್ಲ ಹೊಸತನದ ಸಂದೇಶ ತಂದ,
'ನಮಗಾಗಿ ಹೊಸದಿನ ತಂದೆ' ಎಂದ//೧//
ಬಾನಲ್ಲಿ ಮೇಲಕ್ಕೆ ಏರುತ್ತಾ ಬಂದ,
'ತಾನಿಲ್ಲಿ ರಾಜ' ಎನ್ನುತ್ತಾ ಮೆರೆದ,
'ನನ್ನಂತೆ ನೀವಾಗಿ' ಎಂಬ ಸಂದೇಶ ತಂದ,
'ತಾವಾಗಿ ತನ್ನ ಕೆಲಸ ಮಾಡೋಣ' ಎಂದ//೨//
ನಮ್ಮಯ ಜೀವನ ಸುಡುಬಿಸಿಲೆಂದ
ಸಂಜೆಗೆ ತಂಪು-ಖುಷಿಯಾಗಿರೆಂದ,
ಕೊನೆಯಲ್ಲಿ ಬಗೆಬಗೆ ಬಣ್ಣವ ತಂದ
ಅರಿತು ಬಾಳಿದರೆ ಜೀವನ ಸಾರ್ಥಕವೆಂದ...//೩//
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ