ಮಂಗಳವಾರ, ಫೆಬ್ರವರಿ 13, 2018

116. ಗಝಲ್-28


ಗಝಲ್

ನಮ್ಮೂರ ಕೆರೆ ಬಳಿ ನಿನ್ನನ್ನು ನೋಡಿದ್ದೆ ಮೊದಲು
ನಮ್ಮೂರ ಬಸ್ಸಲ್ಲಿ ನಿನ್ನೊಡನೆ ಕುಳಿತದ್ದೆ ಮೊದಲು...

ನನ್ನೆದೆಯ ಬಡಿತ ನಿನ್ನ ನೋಡಿ ಜೋರಾಗಿ ಕೇಳಿದ್ದೆ
ನನಗಾಗಿ ಬಂದ ಹುಡುಗಿ ನೀ ಅನಿಸಿದ್ದೆ  ಮೊದಲು...

ಪತ್ರವೇ ಬರೆಯಲು ಬರದ ನನಗೆಪ್ರೇಮಪತ್ರ ಬರೆಸಿದ್ದೆ
ಪರ ಹುಡುಗಿಯ ನೋಡದ ನನ್ನನ್ನುಕತ್ತೆತ್ತಿ ನೋಡುವಂತೆ ನೀನೇ  ಮಾಡಿದ್ದೆ ಮೊದಲು..

ನಾನೇ ರಾಜ ನೀನೇ ರಾಣಿ ನಮ್ಮದೇ ಸಾಮ್ರಾಜ್ಯ ಅನಿಸಿದ್ದೆ
ನನ್ನೆದೆಯ ಉಸಿರು ಬಿಸಿಯಾಗಿ ನಿನ್ನೊಡನೆ ತಂಪಾದದ್ದೆ   ಮೊದಲು..

ನಲ್ಲೆ ನಿನ್ನೊಡನೆ ಕಳೆದ ಕ್ಷಣಅಜರಾಮರ ಇದು ಮೊದಲು
ನಿನ್ನ ತೋಳಲಿ ನನ್ನನ್ನಿಳಿಸಿಖುಷಿ ಪಟ್ಟದ್ದೆ ಮೊದಲು..

ಮನದ ಮಾತನು ಸಾರಿಕೊಳ್ಳಲು ನೀ ಸಿಕ್ಕಿರುವೆ
ಬಾಯಿ ಬಿಟ್ಟು ನಕ್ಕಿದ್ದು, ಅತ್ತಿದ್ದು, ಒಂದಾಗಿದ್ದೆ ಮೊದಲು..

ಪ್ರೀತಿ-ಪ್ರೇಮದ ಬಗೆಗಿನ ಕನಸುಗಳು ಮೂತ್ರವಿದ್ದವು
ಪ್ರೀತಿ ಮೊಳೆತದ್ದು ಸದಾ ಬದುಕಲಿ ನಿನ್ನಿಂದಲೇ...

@ಪ್ರೇಮ್-@

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ