ನಾನು- ನೀನು
ನಾನು ನೆಲ, ನೀನು ಜಲ
ನಾನು ಭೂಮಿ, ನೀನು ಬಾನು,
ನಾನು ನದಿ, ನೀನು ಸಾಗರ
ನಾನು ಇಳೆ, ನೀನು ರವಿ
ನಾನು ವಸುಧೆ, ನೀನು ಅಂಬರ
ನಾನು ಮಳೆಹನಿ, ನೀನು ವರ್ಷಧಾರೆ,
ನಾನು ಜಲಧಾರೆ,ನೀನು ಮೇಘಮಾಲೆ
ನಾನು ನೀರಹನಿ, ನೀನು ಜೇನಹನಿ
ನಾನು ಹೂವು, ನೀನು ದುಂಬಿ
ನಾನು ನಗೆ, ನೀನು ಸುಖ
ನಾನು ನೀನು, ನೀನು ನಾನು.
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ