ನನ್ನ ನಗೆಗೆ
ನನ್ನ ಬಾಳಲಿ ಬಯಸದೆ ಬಂದ,
ಭವ್ಯ ಭವಿತವ್ಯಕ್ಕೆ ಭರವಸೆ ತಂದ,
ಬಂಗಾರದಂತ ಭಾವನೆಗಳ ಬಳಕೆಗೆ
ಭರಪೂರ ಬಂದು ಬದುಕಲ್ಲಿ ನಿಂತ..
ಭಯವಿಲ್ಲದೆ ಅಭಯಕ್ಕೆ ಸಾಕ್ಷಿಯನಿತ್ತ
ಬರಡಾದ ಬದುಕಲ್ಲಿ ಬೆಳಕನ್ನು ತಂದಿತ್ತ,
ಬದಲಾಗದ ಬಾಳಲ್ಲಿ ಬದಲಾವಣೆ ತುಂಬುತ್ತ
ಬಂದಿರುವ ಭಯವನ್ನ ಬರಡಾಗಿಸಿ ನಿಂತ..
ಭವಿತವ್ಯಕೆ ಬೆಳಕಾಗಿ ಬಯಕೆಯ ಬೆಳೆಸಿದ
ಬಳ್ಳಿಯಂತಿದ್ದೆನಗೆ ಭಾಗ್ಯವ ಬಿಂಬಿಸುತ
ಬಿಳಿ ಹಾಲಿನಂತೆ ಬಾಳ ಬಯಲಿಗೆ ಬಂದ
ಬರಡಾದ ಬಾಳಿಗೆ ಭವ್ಯತೆಯ ಬಿತ್ತರಿಸಿದ
ನನ್ನ ನಗುವೆ ನಿನಗಿದೋ ನಮನ...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ