ಗುರುವಾರ, ಫೆಬ್ರವರಿ 1, 2018

96. ನಾನು (ಹನಿಗವನ)

*ನಾನೆನ್ನುವುದು*

ನಾನೇನೂ ನೆನಪಲ್ಲ
ನಾನೊಂದು ನೆಪಮಾತ್ರ!
ನಾನು ನಾನೆಂದೇಕೆ
ನಾಟಕವಾಡುವುದು?
ನಾನಿಲ್ಲದಿದ್ದರೂ ನಡೆವುದು
ನಾಡಿನ ನಿತ್ಯದ ನಡತೆ
ನಲಿವು-ನೋವಿನ
ನಗು-ಅಳುವಿನ ನಗದು-ಬದುಕಿನ
ನೃತ್ಯರೂಪಕದ ನರ್ತನ!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ