ಶುಕ್ರವಾರ, ಫೆಬ್ರವರಿ 16, 2018

119. ಭಕ್ತಿ ರಚನೆ

1. ಸ್ಮರಣೆ

ನಿತ್ಯ ನಿನ್ನ ಸ್ಮರಣೆ ಮಾಡೆ
ಕಲಿಸು ವಿದ್ಯೆ -ಬುದ್ಧಿ ದಾನವ,
ನಿನ್ನ ನನ್ನ ಮನದಿ ಕೂಡೆ
ಕೊಡಿಸು ಆರೋಗ್ಯ ಭಾಗ್ಯವ..

ಶಿವನೆ ನಿನ್ನ ಬೇಡಿಕೊಳುವೆ
ದಹಿಸು ನನ್ನ ಕೋಪವ,
ನಿನ್ನ ಪಾದ ಹಿಡಿದು ಬೇಡುವೆ
ಅನುಗ್ರಹಿಸು ನನಗೆ ತಾಳ್ಮೆಯ..

ನಿನ್ನ ಪಾದ ಧೂಳು ನಾನು
ನನ್ನ ಮನವ ಸಂತೈಸು,
ನನ್ನ ತಪ್ಪನೆಲ್ಲ ಕ್ಷಮಿಸಿ ತಾನು
ವರವ ಕೊಟ್ಟು ಆಶೀರ್ವದಿಸು...

ನಿತ್ಯ ನಿನ್ನ ಸ್ಮರಣೆ ಮಾಡೊ
ಶಕ್ತಿ ನಮಗೆ ಕರುಣಿಸು,
ನಿನ್ನ ನಾಮ ಭಜನೆ ಮಾಡೊ
ಭಕ್ತಿ ಶ್ರದ್ಧೆ ನೀಡಿ ಪಾಲಿಸು..

ದಾನ ಧರ್ಮ ಕಾರ್ಯ ಮಾಡೊ
ಕಲೆಯ ನೀಡಿ ಆಶಿಸು,
ದಯಾವಂತ ಎಂಬ ಬಿರುದು ನೋಡೊ
ಭಾಗ್ಯ ನೀಡಿ ಬೆಳಗಿಸು...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ