ಬುಧವಾರ, ಫೆಬ್ರವರಿ 7, 2018

107. ಕವನ-ಯಾರು

1. ಪ್ರಶ್ನೆ

ನನ್ನ ಕಣ್ಣ ಬಿಂಬದಲ್ಲಿ
ಮೂಡಿದವರು ಯಾರು?
ನನ್ನ ಮನದ ಪೊಟರೆಯಲ್ಲಿ
ನೆಲೆಸಿದವರು ಯಾರು!//

ಕನ್ನಡಿಯಲಿ ಇಣುಕುವಾಗ
ನನ್ನೊಳಗೆ ಕಂಡವರು ಯಾರು?
ನನ್ನೆದೆ ತೊಟ್ಟಿಲಲ್ಲಿ
ನಗೆ ಮೀಟಿದವರು ಯಾರು?//

ಇಷ್ಟ ಪಟ್ಟ ದೃಷ್ಠಿ ಬೊಟ್ಟ
ಕೊಡಿಸಿದವರು ಯಾರು?
ದಿಟ್ಟತನವ ಕಲಿಸಿಕೊಟ್ಟು
ಬೆಳೆಸಿದವರು ಯಾರು?//

ಕೆನ್ನೆ ತುಂಬ ಮುತ್ತು ಕೊಟ್ಟು
ತುತ್ತುಣಿಸಿದವರು ಯಾರು?
ಲಲ್ಲೆಗರೆದು, ಒಲ್ಲೆನೆನಲು
ಬಲವಿತ್ತು ಬಲಪಡಿಸಿದವರು ಯಾರು?//

ಅತ್ತು -ಕರೆದು ರಂಪವಾಡೆ
ಎತ್ತಿ ಕೊಂಡೋರ್ಯಾರು?
ಹೆತ್ತು-ಹೊತ್ತು ಸಾಕಿ-ಸಲಹಿ
ದೇವರಾದೋರ್ಯಾರು?
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ