ಶನಿವಾರ, ಸೆಪ್ಟೆಂಬರ್ 29, 2018

495. ನಮನ

ನಮನ

ಪ್ರೀತಿಯ ಹೃದಯವ ದೇವನು ಕೊಟ್ಟಿಹ
ಆನಂದಭರಿತ ಮನವನು ನೀಡಿಹ
ಹೃದಯದಿ ಕುಂದದ ಪ್ರೀತಿಯ ಇಟ್ಟಿಹ
ದೇವನೆ ನಿನಗೆ ನನ್ನಯ ನಮನ...

ಮನದಲಿ ಮಗುವಿನ ಬುದ್ಧಿಯನಿಟ್ಟೆ
ಕ್ಷಣದಲಿ ಯೋಚನೆ ಮಾಡಲು ಬಿಟ್ಟೆ
ಬದುಕಲಿ ಉತ್ತಮ ಸಮಯವ ಕೊಟ್ಟೆ.
ಮಹಾದೇವನೆ ನಿನಗೆ ನನ್ನಯ ನಮನ...

ನೋಟದಿ ಸಡಗರ ಸಂತಸ ಹಂಚಿ
ಮೆದುಳಲಿ ಒಳ್ಳೆಯ ಶಕ್ತಿಯ ಹಚ್ಚಿ
ಬಿಸಾಕಿ ಕೋಪವ ಹಾಕುತ ಕೊಚ್ಚಿ
ಹರನೇ ನಿನಗೆ ನನ್ನಯ ನಮನ

ಹಸಿರಿನ ಪರಿಸರ ನಮಗದೊ ನೀಡಿ
ಕಾಣದ ಗಾಳಿಯ ಪ್ರಾಣಕೆ ನೀಡಿ
ಘನ ಮೈಯೊಳು ಕೆಂಪು ದ್ರವವನು ಕೂಡಿ,
ಬಾಳನು ನೀಡಿದ ಈಶಗೆ ನಮನ..
@ಪ್ರೇಮ್@

494. ಸಿಂಧೂರ

ಸಿಂಧೂರ

ಹಣೆಯ ಗುಡಿಯ
ಪುಟ್ಟ ಲಕ್ಷ್ಮಿ
ಮುಖದ ಮೇಲೆ
ಕೆಂಪು ಚಂದ್ರ...

ವದನಾಗಸದಿ
ಕೆಂಪು ಸೂರ್ಯ
ಮುತ್ತೈದೆಗೆ ಶೃಂಗಾರ
ಸಿಂಧೂರ!!
@ಪ್ರೇಮ್@

ಶುಕ್ರವಾರ, ಸೆಪ್ಟೆಂಬರ್ 28, 2018

493. ಬೇಕು

ಬೇಕಾಗಿದೆ

ಸ್ವಚ್ಛತೆ ಸಾಲದು ಹೊರಗಿನ ಜಗಕೆ
ಬೇಕದು ನಮ್ಮಯ ಮನಸಿನ ಒಳಗೆ.

ನೆಮ್ಮದಿ ಬದುಕು ನಮಗದು ಬೇಕು
ಅದಕೆ ಮನಗಳ ಕೆಡಿಸುವುದ ಬಿಡಬೇಕು.

ಜಗಳವು ನ್ಯಾಯವು ಏಕೆ ಬೇಕಾಗಿ
ಮೂರು ದಿನದ ಬಾಳು ಕಳೆಯಲಿ ಹರುಷದಿ.

ಮೂರನೆಯವನ ವಿಷಯ ನಮಗೇಕೆ?
ನಮ್ಮನೆ ಸುದ್ದಿ ನಮಗೆ ಸಾಲದೇಕೆ?

ಹೃದಯದಿ ಮನದಿ ಸ್ವಚ್ಛತೆ ಬೇಕು
ಮನೆಯನು ಗುಡಿಸಿದ ಹಾಗಿರಬೇಕು.

ಹಿರಿಯಗೆ ಕಿರಿಯಗೆ ಪ್ರೀತಿಯು ಬೇಕು.
ಮನದಲಿ ಶಾಂತಿಯು ನೆಲೆಸಿರಬೇಕು.

ತನ್ನಂತೆಯೆ ಪರರೆಂಬ ಅರಿವಿರಬೇಕು.
ಮಕ್ಕಳ ಹಾಗೆ ಒಲವಿರಬೇಕು.

ಪರಿಸರ ಸ್ವಚ್ಛದ ಜ್ಞಾನವು ಬೇಕು.
ಮರ ಗಿಡ ಬಳ್ಳಿಯ ಬೆಳೆಸಲು ಬೇಕು.

@ಪ್ರೇಮ್@
Translated by Mutturaj sir...

🌹Something Wanted🌹

Not enough cleanliness, outer world.
It's only for inner world of mankind.

We want happy life.
So, avoid impairment of innocent minds.

Quarrelling is unnecessary,
Because we don't know our end.

Why thinking of third person?
Instead thinking of our family.

We maintain our heart clean,
As we sweeping our house.

Elders and youngers need love and affection,
To occupance peace.

Treating others as humans,
As child smiles and loves everyone.

We need cleanliness of nature,
To plant a tree, a forest.

🌹 Prem 🌹

ಗುರುವಾರ, ಸೆಪ್ಟೆಂಬರ್ 27, 2018

492.ಅನುಭವ

ಅನುಭವ

ನಾನು ನನ್ನಷ್ಟಕ್ಕೆ ನಾನೇ
ಕೆಲಸಕ್ಕೆಂದು ನಡೆದುಕೊಂಡು
ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದು ಬಿಟ್ಟೆ!
ತಕ್ಷಣಕ್ಕೆ ಮೇಲೇಳಲಾಗಲಿಲ್ಲ
ಗಾಯವೇನೂ ಆಗಲಿಲ್ಲ
ಸ್ವಲ್ವ ನೋವಷ್ಟೇ ಆಯಿತು
ನಾನೇನು ತೀರಾ ಮುದುಕನೇ
ನಲವತ್ತರ ಗಡಿ ದಾಟಿರುವೆನಷ್ಟೆ!

ಕೆಲವರಿಗೆ ತಮ್ಮ ಕೆಲಸದ  ಒತ್ತಡದಿ
ನನ್ನ ಗಮನಿಸಲು ಸಮಯವಿಲ್ಲ!
ಮತ್ತೆ ಕೆಲವರಿಗೆ ಬಸ್ ಬರುವ ಸಮಯ
ಮೇಲೆತ್ತಲು ಟೈಮ್ ಸಾಲದು
ಇನ್ನು ಹಲವರಿಗೆ ಅದು ಸಂಬಂಧಿಸಿದ ಕೆಲಸವೇ ಅಲ್ಲ!
ಅವರ ಕೆಲಸವಷ್ಟೆ ಅವರು ಮಾಡೋದು!
ಮತ್ತೊಬ್ಬನಿಗೆ ಸಂಬಳ ಬೇಕು!
ಇಲ್ಲಿ ಯಾರು ಕೊಡುವರು ?
ನನ್ನ ಪರಿಚಯವೇ ಇಲ್ಲವನಿಗೆ!
ಹೇಗೆ ತಾನೇ ಎತ್ತಬಲ್ಲ ನನ್ನ!!!

ನೆಂಟರು ಬಹಳ ದೂರದಲಿಹರು,
ಪ್ರೀತಿ ಪಾತ್ರರು ಬ್ಯುಸಿಯಾಗಿಹರು!
ಮಕ್ಕಳು ಶಾಲೆಯ ಬಯಲಲಿ ಇಹರು
ಮಗನ ಆಫೀಸು ಮುಚ್ಚೋದು ತಡರಾತ್ರಿ!
ಮಗಳಿಗೆ ಮಗುವಿನ ಕಿರಿಕಿರಿ ಸಾಕು
ಮಗನಿಗೆ  ಪರಿವಾರದ ಮನಗಳ ಕಿರಿಕಿರಿ..

ಹೆಂಡತಿಗೆತ್ತಲು ಆಗದ ನಾನು
ನೋಡುತಲಿದ್ದೆ ಮೇಲಿನ ಬಾನು
ಬಿದ್ದವ ಬೀಳಲಿ ನಾನಿರೆ ಬದುಕು ಸಂತಸ ಸಡಗರ ಬಿಡಬೇಕು ಜಯಕು..

@ಪ್ರೇಮ್@

493. ಕವಿಗಳೇಕೆ ಬರೆಯುವರು?

ಆತ್ಮ ಸಂತೋಷಕ್ಕೆ, ತನ್ನ ಹೆಸರು ಮರೆಯದಿರಲು, ಹೊಗಳಿಸಿ ಕೊಳ್ಳಲು, ತನ್ನ ನೋವು-ಕಷ್ಟವ ಮರೆಯಲು, ಯಾರಲ್ಲೂ ಹಂಚಿಕೊಳ್ಳಲಾರದ ಸತ್ಯವ ಹೊರಗೆಡವಲು, ತಮ್ಮ ಒಂಟಿತನವ ದೂರಸರಿಸಲು ಕವಿಗಳು ಕವನ ಬರೆಯುವರು.

ಯಾಕೆ ಓದುವರು

ನಿಜವಾಗಿ ಹೃದಯದಿಂದ  ಬರೆಯುವವರು, ತನ್ನ ತುಡಿತಕ್ಕೆ, ಆಲೋಚನೆಗಳಿಗೆ ಬರಹ ರೂಪ ಕೊಟ್ಟು ಇತರರಿಗೂ ತನ್ನ ಆಲೋಚನೆಗಳನ್ನು ಹಂಚ ಬೇಕೆನಿಸುವವರು, ತನ್ನ ಬರವಣಿಗೆಗಳ ಮೂಲಕ ಸಮಾಜವನ್ನು ತಿದ್ದ ಬಯಸುವೆ ಎನುವವರು, ಪೆನ್ನಿನ ಶಕ್ತಿ ಅರಿತವರು, ಪೆನ್ನನ್ನು ಖಡ್ಗಕ್ಕಿಂತಲೂ ಹರಿತವೆಂದು ತಿಳಿದು ಅದನ್ನು ಸರಿಯಾಗಿ ಸಮಾಜವನ್ನು ತಿದ್ದಲು ತುಡಿತವಿರುವ ಮನಗಳ ಜನರು ಬರೆಯುವರು.
    ಭಾಷೆಯ ಬಗ್ಗೆ, ಭಾಷಾ ಬೆಳವಣಿಗೆಯ ಬಗ್ಗೆ, ಸಾಹಿತ್ಯದ ಬಗ್ಗೆ, ಕವನ, ಕವಿತೆಗಳ ಬಗ್ಗೆ ಹೃದಯದಿಂದ ಆಸಕ್ತಿಯಿರುವ ಜನರು ಓದುವರು.
@ಪ್ರೇಮ್@

ಬುಧವಾರ, ಸೆಪ್ಟೆಂಬರ್ 26, 2018

492.ಅನುಭವ

ಅನುಭವ

ನಾನು ನನ್ನಷ್ಟಕ್ಕೆ ನಾನೇ
ಕೆಲಸಕ್ಕೆಂದು ನಡೆದುಕೊಂಡು
ಹೋಗುತ್ತಿದ್ದಾಗ ಕಾಲು ಜಾರಿ ಬಿದ್ದು ಬಿಟ್ಟೆ!
ತಕ್ಷಣಕ್ಕೆ ಮೇಲೇಳಲಾಗಲಿಲ್ಲ
ಗಾಯವೇನೂ ಆಗಲಿಲ್ಲ
ಸ್ವಲ್ವ ನೋವಷ್ಟೇ ಆಯಿತು
ನಾನೇನು ತೀರಾ ಮುದುಕನೇ
ನಲವತ್ತರ ಗಡಿ ದಾಟಿರುವೆನಷ್ಟೆ!

ಕೆಲವರಿಗೆ ತಮ್ಮ ಕೆಲಸದ  ಒತ್ತಡದಿ
ನನ್ನ ಗಮನಿಸಲು ಸಮಯವಿಲ್ಲ!
ಮತ್ತೆ ಕೆಲವರಿಗೆ ಬಸ್ ಬರುವ ಸಮಯ
ಮೇಲೆತ್ತಲು ಟೈಮ್ ಸಾಲದು
ಇನ್ನು ಹಲವರಿಗೆ ಅದು ಸಂಬಂಧಿಸಿದ ಕೆಲಸವೇ ಅಲ್ಲ!
ಅವರ ಕೆಲಸವಷ್ಟೆ ಅವರು ಮಾಡೋದು!
ಮತ್ತೊಬ್ಬನಿಗೆ ಸಂಬಳ ಬೇಕು!
ಇಲ್ಲಿ ಯಾರು ಕೊಡುವರು ?
ನನ್ನ ಪರಿಚಯವೇ ಇಲ್ಲವನಿಗೆ!
ಹೇಗೆ ತಾನೇ ಎತ್ತಬಲ್ಲ ನನ್ನ!!!

ನೆಂಟರು ಬಹಳ ದೂರದಲಿಹರು,
ಪ್ರೀತಿ ಪಾತ್ರರು ಬ್ಯುಸಿಯಾಗಿಹರು!
ಮಕ್ಕಳು ಶಾಲೆಯ ಬಯಲಲಿ ಇಹರು
ಮಗನ ಆಫೀಸು ಮುಚ್ಚೋದು ತಡರಾತ್ರಿ!
ಮಗಳಿಗೆ ಮಗುವಿನ ಕಿರಿಕಿರಿ ಸಾಕು
ಮಗನಿಗೆ  ಪರಿವಾರದ ಮನಗಳ ಕಿರಿಕಿರಿ..

ಹೆಂಡತಿಗೆತ್ತಲು ಆಗದ ನಾನು
ನೋಡುತಲಿದ್ದೆ ಮೇಲಿನ ಬಾನು
ಬಿದ್ದವ ಬೀಳಲಿ ನಾನಿರೆ ಬದುಕು ಸಂತಸ ಸಡಗರ ಬಿಡಬೇಕು ಜಯಕು..

@ಪ್ರೇಮ್@

493. ಕಾಲ

ಕಾಲ

         -:ಅಂದು:-

ಒಂದು ಕಾಲವಿತ್ತು
ಸಂಬಳ ದೊರೆತೊಡನೆ ಬ್ಯಾಗಿನಲ್ಲಿ ಹಣ
ಪರ್ಸಿನಲ್ಲೂ ಹಣ, ಖುಷಿಯೋ ಖುಷಿ!
ಅಂದು ಶಾಪಿಂಗ್ ಏನೂ ವಾರೆವಾ
ವ್ಯಾಪಾರದ ಭರಾಟೆಯೋ ಭರಾಟೆ
ವಿವಿಧ ಚಪ್ಪಲಿ, ಬ್ಯಾಗು, ಸೀರೆ, ಬಳೆ
ಶೃಂಗಾರದ ಸರಕುಗಳು ಅನೇಕಾನೇಕ
ಅಂಗಡಿಯಲ್ಲಿ ಚೌಕಾಸಿಯೇನು!
ಸಂತಸವೇನು... ಸಡಗರವೇನು..

-: ಇಂದು:-
ಸಂಬಳ ಬಂತು ...ಹೋಯ್ತು..
ಕೈಗೆ ಬಂದ ತುತ್ತು ಬಾಯಿಗೆ ಬರದು
ಡಿಜಿಟಲ್ ಯುಗ ಟೆಕ್ನಿಕಲ್ ಯುಗ!
ಬಾಡಿಗೆ ಹೋಯ್ತು ಮನೆ ಲೋನ್ ಕಟ್
ಬಡ್ಡಿ ಹೋಯ್ತು ಕರೆಂಟ್ ಬಿಲ್ ಕಟ್
ರೀಚಾರ್ಜ್ ಆಯ್ತು ಪೇಮೆಂಟ್ಸ್ ಆಯ್ತು..
ಆನ್ ಲೈನಲ್ಲೆ ಬಟ್ಟೆ ಸಾಮಾನು ಬಂತು!
ಬ್ಯಾಲೆನ್ಸ್ ಸೊನ್ನೆ ಆಯ್ತು
ದುಡ್ಡು ನೋಡಲಿಲ್ಲ, ಕೈಲಿ ಕಣ್ಣಲ್ಲಿ!
ಬಂತು, ಖರ್ಚಾಯ್ತು ಮುಗೀತು!
ಮತ್ತೆ ಮುಂದಿನ ಸಂಬಳಕ್ಕಾಗಿ ದುಡಿ!
ದುಡ್ಡಿಗಾಗಿ ಯಾವ್ ಯಾವ್ದೋ ದಾರಿ ಹಿಡಿ!!!!
@ಪ್ರೇಮ್@

491. ನಮನವು

ನಮನವು

ತಾಯೆ ಚಾಮುಂಡಿಯೆ ಅಮ್ಮಾ ಹರಸು
ಮಾತೆ ಗೌರಿಯೆ ರಕ್ಷಿಸು ಬದುಕು

ಮನಕೆ ಆನಂದ ನೀಡಿ ಸಲಹುವೆ
ಬಾಳ ನಾವೆಯ ನೀನೆ ಎಳೆಯುವೆ

ನಿನ್ನ ಶಕ್ತಿಯು ಅಪಾರ ಜಗದಲಿ
ನಿನ್ನ ಮೂಗುತಿ ದಿನವು ಪ್ರಜ್ವಲಿಸಲಿ

ನಮ್ಮ ಕಾರ್ಯವು ಜಯದತ್ತ ಸಾಗಲಿ
ಹಿರೆಯರೆಲ್ಲರು ನಮ್ಮನ್ನು ಹೊಗಳಲಿ

ಕಿರಿಯರ ಬಾಳು ನಮ್ಮಿಂದ ಬೆಳಗಲಿ
ಸೋಮಾರಿ ನಿದ್ದೆಯು ದೂರ ತೊಲಗಲಿ

ಸೀರೆ ನಿನ್ನಯ ಮತ್ತು ಹೆಚ್ಚಲಿ
ಬಳೆಯ ಶೃಂಗಾರ ನನಗೂ ದಕ್ಕಲಿ

ಕುಳಿತ ಭಂಗಿಗೆ ನಾನು ಸೋತಿಹೆ
ನಿನ್ನ ನೋಡುತ ನನ್ನನ್ನೆ ಮರೆತಿಹೆ

ಬೇರೇನು ಬೇಡೆನು ನಾನು ನಿನ್ನಲಿ
ಪ್ರೀತಿ ತುಂಬಿದ ಹೃದಯವೆ ಇರಲಿ

ದ್ವೇಷ ಮತ್ಸರ ದೂರ ಹೋಗಲಿ
ಕಾಮ ಕ್ರೋಧವು ಕಡಿಮೆಯಾಗಲಿ

ದುಷ್ಟ ಗುಣಗಳು ದೂರವಾಗಲಿ
ಕೆಟ್ಟ ಚಟಗಳು ನಾಶವಾಗಲಿ

ಅಮ್ಮ ನಿನ್ನಯ ನಾಮ ಸ್ಮರಿಸುವೆ
ನಿನ್ನ ಹಾಡನು ನಾನು ಹಾಡುವೆ

ನಿನ್ನ ಕಂದರ ಹರಸೆಂದು ಬೇಡುವೆ
ಮನದ ಕಲ್ಮಶ ನೀ ದೂರಗೊಳಿಸುವೆ....
@ಪ್ರೇಮ್@

ಮಂಗಳವಾರ, ಸೆಪ್ಟೆಂಬರ್ 25, 2018

490. ನಂಬಿಕೆ

ಇಹುದು ನಂಬಿಕೆ

ಗಾಳಿ ಕದಡಿಡೆ ನೀರು ಮುಗಿದಿದೆ
ಮಣ್ಣು ವಿಷಮಯ ಧರೆಯು ಹಾಳಾಗಿದೆ
ಎಂದೆಂಬರು ಜನ ತಾವೆ ಕೆಡಿಸಿ ಧರಿತ್ರಿಯ
ನಮಗೇನೋ ಭರವಸೆ ಇಳೆ ನಿನ್ನ ಮೇಲೆ..

ತಾರೆಗಳೂ ಸಾಯುವುವಂತೆ
ಸಾವಿರಾರು ವರುಷದ ಬಳಿಕ
ಸ್ಫೋಟಗೊಂಡು ಕುಬ್ಜವಾಗಿ
ನಮಗೇನೋ ನಂಬಿಕೆ ರವಿ ನಿನ್ನ ಮೇಲೆ....

ಮರಗಳೆಲ್ಲ ಉರುಳಿದ ಬಳಿಕ
ಭೂತಾಯಿ ಬಿಸಿಯೇರುವಳಂತೆ
ಧ್ರುವದ ಹಿಮ ಕರಗುವುದಂತೆ
ನಮಗೆಲ್ಲಾ ನಂಬಿಕೆ ಕಾವ ಹಿಮಾಲಯದ ಮೇಲೆ..

ಸಾಗರವು ಉಕ್ಕುವುದಂತೆ
ವಿಷವಾದ ಜಲ ಕೊಲ್ಲುವುದಂತೆ
ಜಲಪ್ರಳಯ ಬರುವುದಂತೆ
ಆದರೂ ಸಾಗರ,ಕೊಲ್ಲಿ ಸಮುದ್ರಗಳೆ
ಆಸರೆ ಸದಾ ನೀವು ನಮಗೆ
ಉಕ್ಕಿ ಹರಿಯದಿರಿ ಭಾರತಿಯೆಡೆಗೆ
ಉಳಿಸೆಮ್ಮ ನಂಬಿಕೆಯ ನಿಮ್ಮೆಡೆಗೆ
ಭಯದಿ ಭವದಿ ಬದುಕುವ ಬಾಳಿಗೆ.

@ಪ್ರೇಮ್@

490. ನಂಬಿಕೆ

ಇಹುದು ನಂಬಿಕೆ

ಗಾಳಿ ಕದಡಿಡೆ ನೀರು ವಿಷವಾಗಿದೆ
ಮಣ್ಣು ವಿಷವಾಗಿದೆ ಧರೆಯು ಹಾಳಾಗಿದೆ
ಎಂದೆಂಬರು ಜನ ತಾವೆ ಕೆಡಿಸಿ ಧರಿತ್ರಿಯ
ನಮಗೇನೋ ಭರವಸೆ ಇಳೆ ನಿನ್ನ ಮೇಲೆ..

ತಾರೆಗಳೂ ಸಾಯುವುವಂತೆ
ಸಾವಿರಾರು ವರುಷದ ಬಳಿಕ
ಸ್ಫೋಟಗೊಂಡು ಕುಬ್ಜವಾಗಿ
ನಮಗೇನೋ ನಂಬಿಕೆ ರವಿ ನಿನ್ನ ಮೇಲೆ....

ಮರಗಳೆಲ್ಲ ಉರುಳಿದ ಬಳಿಕ
ಭೂತಾಯಿ ಬಿಸಿಯೇರುವಳಂತೆ
ಧ್ರುವದ ಹಿಮ ಕರಗುವುದಂತೆ
ನಮಗೆಲ್ಲಾ ಕಾವ ಹಿಮಾಲಯದ ಮೇಲೆ..

ಸಾಗರವು ಉಕ್ಕುವುದಂತೆ
ವಿಷವಾದ ಜಲ ಕೊಲ್ಲುವುದಂತೆ
ಜಲಪ್ರಳಯ ಬರುವುದಂತೆ
ಆದರೂ ಸಾಗರ,ಕೊಲ್ಲಿ ಸಮುದ್ರಗಳೆ ಆಸರೆ ನೀವೆಮಗೆ
ಉಕ್ಕಿ ಹರಿಯದಿರಿ ಭಾರತಿಯೆಡೆಗೆ
ಉಳಿಸೆಮ್ಮ ನಂಬಿಕೆಯ ನಿಮ್ಮೆಡೆಗೆ
ಭಯದಿ ಭವದಿ ಬದುಕುವ ಬಾಳಿಗೆ.

@ಪ್ರೇಮ್@

489. Run

The world is not sleeping

Each moment all are running
With the precious time
Running for life
Running to achieve
Running to reach
Running to be the first
Running to compete

Get started to run
Get started to compete
Get started to achieve
Get started to be the first
Get started to be different
Get started to work

Life is short
Make it sweet
Make it memorable
Make it tremendous
Make it marvelous
Make it rock
Make it for ever
Male it successful

Run because you born
Run to live
Run to love all
Run to be successful
Run to be good
Run to achieve good..

@prem@

488. ಕಣ್ಣ ನೋಟ

ಕಣ್ಣಲ್ಲಿ

ಮಕ್ಕಳ ಕಾಪಿಡಲು ತಾಯಿ ಸದಾ
ತನ್ನೊಲವ ದಿಟ್ಟಿಯನು ಮೇಲಿರಿಸುವ ತೆರದಿ
ಭೂ ತಾಯಿಯು ಕಂದರ
ಪೊರೆದು ಕಾಯುತಲಿಹಳು
ತನ್ನ ದಿಟ್ಟ ನೋಟದಿ ದಿಟ್ಟಿಸುತಲಿ..

ಕಣ್ಣಲ್ಲಿ ಕಣ್ಣಿಟ್ಟು ಸಲಹುವ
ಮಾತೆಗೆ ತಿಳಿಯದೆ ಮನುಜನ
ಅಹಂಭಾವದ ಹುಟ್ಟಡಗಿಸುವ ಪರಿ?
ಯಾವ ಜಾತಿ ಯಾವ ನೀತಿ
ಯಾವುದಿಲ್ಲ ತಾಯಿಗೆ
ಎಲ್ಲರೊಂದೆ ಮಕ್ಕಳೆ

ತಾಯಿ ವರವ ನೀಡುವಾಗ
ಜಾತಿ ಧರ್ಮ ಬೇಧವಿಲ್ಲ
ಶಾಪ ನೀಡಿ ಶಿಕ್ಷೆ ಕೊಡುವಾಗಲೂ
ಹಿರಿಯ ಕಿರಿಯರೆಂಬುದಿಲ್ಲ..
ಮಳೆಯೋ ಬಿಸಿಲೋ ಬರದ ಸಿಡಿಲೋ
ಒಂಟಿ ಅಲ್ಲ ತಾಯಿ ಮಡಿಲು

ಅಮ್ಮ ತನ್ನ ಮಗುವಿಗಾಸರೆ
ಕಂದರೆಲ್ಲ ಮಾತೆಯ ಕೈಸೆರೆ
ಮನದ ಮಗುವು ಮಾತೆಗಿಷ್ಟ
ತನುವ ಕೊಟ್ಟು ಸಾಕಿ ಸಲಹಿ
ತನ್ನ ನೋವನೆಲ್ಲ ಮರೆತು
ಬೆಳೆಸಿ ತನಗೆ ಖುಷಿಯ ದೊರೆತು...
@ಪ್ರೇಮ್@

487. ಮುದ್ದು

ನನ್ನ ಕಣ್ಣು

ಕುಳಿತಲ್ಲಿಯೆ ಕೂರಲಾರದೆ
ಅತ್ತಿಂದಿತ್ತ ಓಡಾಡುವ
ನನ್ನ ಪುಟ್ಟ ಮುದ್ದು ಪಾಪ
ಚಂಚಲದಿ ಓಡಾಡುತ್ತಾ..

ಅಮ್ಮನೊಡನೆ ಹಠವು ಹೆಚ್ಚು
ಅಪ್ಪನೊಡನೆ ಅಚ್ಚುಮೆಚ್ಚು
ರಂಪವಾಡೆ ಯಾರು ಬೇಕು
ಮನೆಯಲೆಲ್ಲ ತನ್ನ ಮಾತೆ ಮೇಲು.

ಮುದ್ದು ಪೆದ್ದು ಮಾತು ಚಂದ
ಲಲ್ಲೆಗರೆವ ಮನವು ಅಂದ
ಇಷ್ಟವೆನಗೆ ಮನಕಾನಂದ
ಹರಟೆಯೇಕೆ ನನ್ನ ಕಂದ?

ಬದುಕಲುಂಟು ಮನದ ನಂಟು
ಜೀವ ಜಗದಲೇನು ಉಂಟು
ಕಂದ ನಿನ್ನ ಮನವು ಸ್ಪೂರ್ತಿ
ನನ್ನ ಬಾಳಿಗದುವೆ ಕೀರ್ತಿ..
@ಪ್ರೇಮ್@

ಸೋಮವಾರ, ಸೆಪ್ಟೆಂಬರ್ 24, 2018

486. ಪೋಡ್ಯಡ

ಪೋಡ್ಯಡೆ

ಸೋಲುಗು ಪೋಡ್ಯಡೆ
ಸೋಲು ನಮನ್ ಸೋಪಾವುನ ದುಂಬು
ಸೋಲುನು ನಮ ಸೋಪಾವೊಡು
ದಾಯೆ ಪಂಡ
ಸೋಲು ನಮನ್ ಸೋಪಾದ್
ಯಾನೆ ಮೇಲ್  ಪಂದ್ ಮೆರೆಯರೆ ಬಲ್ಲಿ.

ಸೋಲುನು ಸೋಪಾದ್ ಬದ್ ಕ್ ಡ್
ನಮ ಗೆಂದೊಡು
ಅಂಚ ಗೆಂದಿನಾಯನ್ ತೂಂಡ
ಸೋಲು ಸೋತುದು ಬಲಿಪುಂಡು
ಸೋಲುಗು ಸೋತಿನಾಯನ್ ತೂಂಡ
ಬಾರಿ ಖುಷಿ ಸೋಲುಗು
ಐಕ್ ಆಯನ ಬೆರಿ ಪತ್ ದೆ ಬರ್ ಪುಂಡು

ಸೋಲುಗು ಪೋಡ್ ಯಂದೆ ಬೆರಿ ಪಾಡ್ದ್ ಪೋದು
ಗೆಂದಿನ ಜನಕ್ ಸೋಲು ಸೋಪುಂಡು
ಸೋತಿನ ಸೋಲು ಬಲಿಪಾಡ್
ಗೆಂದುನ ಗೆಲ್ಮೆ ನಮ್ಮವಾವಡ್
ಸೋಲು ಸೋತುದು ಬಲಿಪಡ್
ಗೆಲ್ಮೆ ಕಡೆಮುಟ್ಟ ಬದ್ ಕ್ ಡ್ ಒರಿಯಡ್
@ಪ್ರೇಮ್@

ಭಾನುವಾರ, ಸೆಪ್ಟೆಂಬರ್ 23, 2018

485. ಆಸೆ

ಆಸೆ

ಸಾಗರದೊಳಗಡೆ ನುಗ್ಗುತ ಬರುವ
ಅಲೆಯಾಗುವ ಆಸೆ
ಕಡಲಿನ ಒಡಲಿನ ಬಗೆಯುತಲಿರುವ
ನೊರೆಯಾಗುವ ಆಸೆ..

ಉಕ್ಕುವ ತೆರೆಯಲಿ ತೇಲುತ ಬರುವ
ಹುಲ್ಲಾಗುವ ಆಸೆ
ಚಂದ್ರನ ಬೆಳಕಿಗೆ ಉಕ್ಕುತ ಬರುವ
ಶರಧಿಯಾಗುವ ಆಸೆ

ಸಮುದ್ರದ ತಟದಲಿ ಹರಡುತಲಿರುವ
ಚಿಪ್ಪಾಗುವ ಆಸೆ
ದಡದೆಡೆ ಬಂದು ಹಾಯಾಗಿ ಮಲಗುವ
ಮರಳಾಗುವ ಆಸೆ.

ಬಿಳಿ ಬಿಳಿ ಬಣ್ಣದ ನೊರೆಯೊಳಗಿರುವ
ಹನಿಯಾಗುವ ಆಸೆ
ಕಡಲಿನ ನೀರಲಿ ಅವಿತು ಕುಳಿತಿಹ
ಉಪ್ಪಾಗುವ ಆಸೆ

ಸಾಗರದಡಿಯಲಿ ಹೊಳೆಯುತಲಿರುವ
ಮುತ್ತಾಗುವ ಆಸೆ
ಹವಳದ ದಿಬ್ಬದ ಕಸವನು ತಿವಿಯುವ
ಮೀನಾಗುವ ಆಸೆ..

@ಪ್ರೇಮ್@

484. ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-14

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-14

ಹೀಗೇ ಹೋಗುತ್ತಾ ಕಂಡೆ ಕೆಲವರ ಜೀವನ ಅದೆಷ್ಟು ನಿರಾಳ. ಒಂದೇ ಗುರಿ, ಅದನ್ನೇ ಸುಲಭವಾಗಿ ದಡ ಸೇರಿ ಬಿಡುತ್ತಾರೆ. ಆದರೆ ಇನ್ನು ಕೆಲವರ ಬದುಕು ಅದೇಕೆ ಕಷ್ಟ? ಇತ್ತ ದರಿ, ಅತ್ತ ಪುಲಿ ಎಂಬಂತಾಗಿರುತ್ತದೆ. ಪ್ರತಿಯೊಂದು ಮಾರ್ಗದಲ್ಲು ಅಡೆತಡೆ, ಪ್ರತಿ ಹಾದಿಯಲ್ಲು ಕಲ್ಲು ಮುಳ್ಳುಗಳನ್ನು ದಾಟಿಯೇ ಸಾಗಬೇಕು. ಅಲ್ಲೂ ಗೋಡೆಗಳು, ಅವುಗಳನ್ನು ಸೀಳಿಕೊಂಡೆ ಮುಂದುವರೆಯಬೇಕು, ಸ್ಪಷ್ಟವಾದ ಯಾವುದೇ ತೀರ್ಮಾನ ಮಾಡಲು ಸಾಧ್ಯವಿಲ್ಲ. ಮನವು ತಳಮಳದಲ್ಲೇ ಇರುವುದು. ಜೀವನದ ಘಟನೆಗಳೂ ವಿಚಿತ್ರ. ಯಾರೂ ಸಹಾಯಕರಾಗಲಾರರು, ದೇವರನ್ನು ಹೊರತುಪಡಿಸಿ!
   ಒಂದೇ ತಾಯಿಗೆ ಒಡಹುಟ್ಟಿದ ಅಕ್ಕ ತಂಗಿ, ಅಣ್ಣ ತಮ್ಮಂದಿರಲ್ಲೂ ಹೀಗಾಗುವುದಿದೆ. ಗೆಳೆಯ ಗೆಳತಿಯರೂ ಮರುಗುವುದಿದೆ. ಆದರೆ ಕಷ್ಟ ಪಟ್ಟವರು ಪಡುತ್ತಲೇ ಇರುತ್ತಾರೆ, ಗಾಣದೆತ್ತುವಿನ ತರಹ!
  ಮನಕೆ ಸುಖ ಶಾಂತಿ ಇರುವುದು ಎಲ್ಲಾ ಕಾರ್ಯಗಳೂ ಅನಾಯಸವಾಗಿ ನಡೆದಾಗ. ಅದೇ ಎನಿಸಿದ್ದೊಂದು, ನಡೆದದ್ದೊಂದು ಆದಾಗ ಬದುಕು ಬರ್ಭರವೆನಿಸುತ್ತವೆ, ಸಂಬಂಧಗಳು ನಲುಗಿ ಹೋಗುತ್ತವೆ. ಪ್ರೇಮ ಬತ್ತಿ ಹೋಗುತ್ತದೆ. ಮನದುಂಬಿ, ಎದೆಯುಬ್ಬಿ ಬದುಕೇ ಭಾರವೆನಿಸಿ ಬಿಡುತ್ತದೆ.
     ಬದುಕಲ್ಲಿ ಕಷ್ಟಗಳನ್ನೇ ಎದುರಿಸಿಕೊಂಡು ಬಾಳುವವನಿಗೆ ದೇವರು ಕಷ್ಟ ಕೊಡುವುದೂ ಜಾಸ್ತಿಯೇನೋ. ಪರೀಕ್ಷೆಯಲಿ ಪಾಸಾದವಗೆ ಮತ್ತೊಂದು ಪರೀಕ್ಷೆ. ಅದು ಮುಗಿದ ಕೂಡಲೇ ಇನ್ನೊಂದು. ದೇವರೂ ಕೂಡ ಒಬ್ಬ ಗಣಿತ ಶಿಕ್ಷಕನೇ. ಒಂದಾದ ಮೇಲೊಂದು ಸಮಸ್ಯೆಗಳ ಕೊಡುತ್ತಲೇ ಇರುತ್ತಾನೆ. ಅದನ್ನು ಬಿಡಿಸಿದಷ್ಟು ಮತ್ತಷ್ಟು ಸಮಸ್ಯೆಗಳ ತಂದು ರಾಶಿ ಸುರುವಿ ಬಿಡುತ್ತಾನೆ. ಜೀವನವೇ ಬೇಡವೆನುವಾಗ ಮುಂಗೈಗೆ ಚೂರು ತುಪ್ಪ ಸವರಿ ಬಿಡುತ್ತಾನೆ.
ಬದುಕಿನಲಿ ಏನೇ ಆದರೂ ಉತ್ಸಾಹ ಕ್ಷಯಿಸ ಬಾರದು. ಕಷ್ಟಗಳ ಮೆಟ್ಟಿ ನಿಲ್ಲಬೇಕು. ನನಗೆ ದೇವರು ಏಕೆ ಶಿಕ್ಷೆ ಕೊಟ್ಟ ಎನ್ನುವ ಬದಲು ದೇವರು ಪರೀಕ್ಷೆಗೆ ಇತರರ ಬಿಟ್ಟು ನನ್ನನ್ನೆ ಸೆಲೆಕ್ಟ್ ಮಾಡಿಹನೆಂದರೆ ನನ್ನಲೇನೋ ಹೊಸತನವಿರಲೇ ಬೇಕು. ನನ್ನನ್ನು ದೇವರು ಹೆಚ್ಚು ಪ್ರೀತಿಸುತ್ತಿರಬೇಕು, ಹೆಚ್ಚು ಪ್ರೀತಿಸುವವರೇ ಅಲ್ಲವೇ ಹೆಚ್ಚು ಪರೀಕ್ಷಿಸುವುದು! ಪ್ರೀತಿ ಹೆಚ್ಚಾದಷ್ಟು ಕೇರ್ ಹೆಚ್ಚು. ಹಾಗೆ ದೇವರಿಗೂ ಕೂಡಾ. ನನ್ನ ಮೇಲೆ ಪ್ರೀತಿಯಿದೆ, ನನ್ನ ಪರೀಕ್ಷಿಸಿ ನೋಡಿ ತೂಗುತ್ತಿರುತ್ತಾರೆ ಅಂದುಕೊಳ್ಳ ಬೇಕು. ದೇವರಿಲ್ಲದೆ ಜಗವುವುಂಟೇ? ದೇವರಿಲ್ಲದೆ ನೀವು ನಾವುಂಟೇ? ದೇವರ ತೀರ್ಪು ಅಂತಿಮವಾದದ್ದು. ಅವ ನಡೆಸಿದಂತೆ ನಡೆಯೋಣ.ನೀವೇನಂತೀರಿ?
@ಪ್ರೇಮ್@

ಶನಿವಾರ, ಸೆಪ್ಟೆಂಬರ್ 22, 2018

483.ತುಳು ಕಬಿತೆ

ಪ್ರತಿ ಇರ್ಲ್ ದ ಪಿರವು ಪಗೆಲ್ ಉಂಡುಗೆ

ಇನಿ ಎಲ್ಯ ಚೂರು ಬೇಲೆ ಆಯಿನಿ ಪಂದ್
ಬೇಜಾರ್ ಮಲ್ಪಡೆ ದಾಯೆಪಂಡ
ಪ್ರತಿ ಇರ್ಲ್ ದ ಪಿರವು ಒಂಜಿ
ಪಗೆಲ್ ಬತ್ತೆ ಬರ್ ಪುಂಡುಗೆ

ನಡತಿನ ತಾದಿ ಸರಿ ಇಜ್ಜಿ ಪಂದ್
ಗೊತ್ತಾಯಿ ಕೂಡ್ಲೆ ಸರಿ ಮಲ್ತೊನರೆ
ಒಂಜಿ ಅವಕಾಶ ಉಂಡುಗೆ
ದಾಯೆ ಪಂಡ ಪ್ರತಿ ಇರ್ಲ್ ದ ಪಿರವುಡು
ಒಂಜಿ ಪಗೆಲುಂಡುಗೆ.

ನನ ದುಂಬು ಪೋಯರೆ ಆಪುಜಿ
ಮೂಲೆಡೇ ಉಂತೊಡುಂದುದು ಇಜ್ಜಿ
ಒಂಜಿ ಮೂಲೆಡ್ ಕುಲ್ಲೊಡುಂದುಲಾ ಇಜ್ಜಿ
ದಾಯೆಂದ್ ತೆರಿದ್ ದುಂಬು ಪೋವೊಲಿ ದಾಯೆ ಪಂಡ
ಪ್ರತಿ ಇರ್ಲ್ ದ ಪಿರವೊಂಜಿ ಪಗೆಲ್ ಬರ್ಪುಂಡುಗೆ

ಪಶು ಪಕ್ಕಿ ಪ್ರಾಣಿಲುಲಾ ಕುಲ್ದಿನಲ್ಪನೆ  ಕುಲ್ಲುಜ
ದಿನದಿನ ಬದ್ ಕ್ ಡ್ ದುಂಬು ಪೋದು
ತನ್ನ ತಿನಿಸ್ ನಾಡ್ ದ್ ಒಂತೆ ಗೂಡುಡು ಆರಾಮ ಮಲ್ಪುವ
ದಾಯೆ ಪಂಡ ಪ್ರತಿ ಇರ್ಲ್ ದ ಪಿರವು ಪಗೆಲುಂಡುಗೆ.

ನಮಲ ಅಂಚೆನೆ ಬಂಗಂದ್ ಪಾರ್ ಪೋದು
ಬುಡ್ಕ ನೀರ್ ಗ್ ಲಾಗಿದೋ
ಬಲ್ಲ್ ಪಾಡೊಂದೋ ವಿಷ ಪರ್ ದೋ
ಸೈಪಿನಿ ಅತ್ತ್ ಒರ ಯೋಚನೆ ಮಲ್ಪೊಡು
ಪೂರೆರೆಗ್ ಲಾ ಪ್ರತಿ ಇರ್ಲ್ ದ ಪಿರವು
ಪಗೆಲೊಂಜಿ ಬರ್ ಪುಂಡುಂದ್
@ಪ್ರೇಮ್@

482.ಬೇಕಿದೆ

ಬೇಕಿದೆ

ಹೊಡಿ ಬಡಿ ಗುದ್ದು
ಎನ್ನುವವರ ನಡವಲೀಗ
ಶಾಂತಿ ಮಾತು ಬೇಕಿದೆ!
ವಿಲನ್ ಹೀರೋ ಆಗಿಹ
ಸಮಯದಲಿ ನಿಜ ಹೀರೋ ಬೇಕಿದೆ..

ಬಡಿಯುತಿಹ ಮನಗಳ ತಣಿಸೆ
ತಣ್ಣೀರ ಮನವೀಗ ಬೇಕಿದೆ
ಹೊಡೆದಾಟಕೆ ಕುಮ್ಮಕ್ಕು ನೀಡುವವರಿಗೆ ಶಾಂತಿ ಸಹನೆ ಬೇಕಿದೆ.

ಮನದ ಕದವ ಮುಚ್ಚಿದವಗೆ
ಪ್ರೀತಿ ಬೆಳಕ ಉರಿಸ ಬೇಕಿದೆ
ಬದಲಿ ಮುಖವ ಇಟ್ಟವಗೆ
ನೈಜ ಛಾಪು ತೋರ ಬೇಕಿದೆ!

ಭರತಖಂಡ ಒಡೆಯ ಹೊರಟವಗೆ
ಒಗ್ಗಟ್ಟ ಬಲ ತಿಳಿಸ ಬೇಕಿದೆ
ಹಾಲಿನಲ್ಲಿ ಜೇನು ಸೇರಿ ಆದ
ಸವಿಯ ತೋರಬೇಕಿದೆ!!

ವಸ್ತು ಪ್ರೇಮ ಮಿತ್ರ ದ್ರೋಹ
ಇಲ್ಲಿ ತೊಲಗ ಬೇಕಿದೆ
ವಾಸ್ತವದ ಸವಿಯಂಶ
ಬೆಳಕಿಗೆ ಬರಬೇಕಾಗಿದೆ..
@ಪ್ರೇಮ್@

481. ಹಾಯ್ಕುಗಳು

ಹಾಯ್ಕುಗಳು

ನನ್ನ ಮನಸ್ಸು
ಅರಿಯಲಾಗದಂತೆ
ಗೂಡು ಕಟ್ಟಿದೆ.

ಕನಸ ಕಂಡ
ಮನದೊಳಗೆ ಭ್ರಮೆ
ನೆಲೆ ನಿಂತಿದೆ

ಕವಿಯೊಳಗೆ
ಕವನ ಗೂಡು ಕಟ್ಟಿ
ಮೊಟ್ಟೆಯಿಟ್ಟಿದೆ

ಕಾಡುವ ಕವನ
ಮೈಮನ ಪರಚುತ್ತಾ
ಕುಣಿದಾಡಿದೆ

ಕವಿ ಮನವು
ಬರಿದಾಗದಿರಲು
ಕವನವಿದೆ

@ಪ್ರೇಮ್@

480. ಗಣಪತಿ ಸ್ತುತಿ-2

ಗಣಪಗೆ ಪ್ರಾರ್ಥನೆ

ಗಣಪತಿಯ ಶ್ರೀ ಪಾದಕ್ಕೆ ನಮಿಸುತಲಿ
ಕರುಣೆ ತೋರಲು ಬೇಡುವ
ನಿತ್ಯ ನಮ್ಮನು ಪೊರೆಯೊ ಎಂದು
ಬೇಡಿ ಪಾದಕೆ ನಮಿಸುವ..

ಲಂಬೋದರನು ಲಕುಮಿಕರನು
ಭಕ್ತ ಪಾಲಿಗೆ ಒಲಿಯುವ
ಅಂಬಾಸುತ ಅನವರತ
ಮೊದಲ ಪೂಜೆಯ ಪಡೆಯುವ..

ಗಜಾನನನೇ ಏಕದಂತನೇ
ವಿಘ್ನ ನಾಶ ನೀ ಮಾಡುವೆ
ಗೌರಿ ತನಯನೆ ಬಾಲಚಂದ್ರನೆ
ಅನವರತವು ನಮ್ಮ ಕಾಯುುವೆ...
@ಪ್ರೇಮ್@

479.ಶಿವ ಸ್ತುತಿ

.ಶಿವ ಸ್ತುತಿ

ಶಿವನೆ ಗೌರಿವರನೆ ಬೇಡುವೆ
ನಮ್ಮ ಕಾಯೊ ಮಹಾ ದೇವನೆ
ಬೇಡಿ ಕೊಳ್ಳುವೆನು ನಿನ್ನ ನಾನು
ವರವ ಕರುಣಿಸೊ ಈಶನೆ..

ನಿನ್ನ ಬೇಡುವ ಭಕ್ತರಿಗೆ ನೀನು
ಬೇಡಿದ ವರವ ನೀಡುವೆ
ತಂದೆ ತಪ್ಪಿಸು ನಮ್ಮ ಕಷ್ಟವ
ನಿನ್ನ ದಯೆಯನು ಕರುಣಿಸು

ಮನದಿ ನಿನ್ನಯ ಭಕ್ತಿ ಮಾಡುವೆ
ಕಾಯೊ ನನ್ನನು ಮಹೇಶನೆ
ನಿನ್ನ ಪಾದದ ಧೂಳು ನಾನು
ತಪ್ಪುಗಳ ಕ್ಷಮಿಸೆಮ್ಮಯ..
@ಪ್ರೇಮ್@

478.ಗಣಪತಿ ಸ್ತುತಿ

ಗಣಪತಿ ಸ್ತೋತ್ರ

ಗಣೇಶ ನಿನ್ನಯ ನಾಮವ
ಜಪಿಸುವೆ ನಾ ನಿತ್ಯವೂ..

ವಿದ್ಯೆಗೆ ನೀನೇ ಅಧಿಪತಿಯೂ
ಮೊದಲ ಪೂಜೆಗೆ ಶ್ರೀಪತಿಯೂ
ಉಮಾಮಹೇಶ್ವರ ಪುತ್ರನೇ..

ಆನೆಯ ಮುಖವನು ಹೊತ್ತವನೇ
ಇಲಿಯನು ವಾಹನ ಇಟ್ಟವನೆ
ತಂದೆ ತಾಯಿಯೆ ಪ್ರಪಂಚ ಎಂದವನೇ...
@ಪ್ರೇಮ್@

477. ತುಳು ಬರಹ

ನಮ್ಮ ತುಳುನಾಡ ಗೊಬ್ಬುಲು

ತುಳು ನಾಡ್ದ ಕಲೊಟು ಕಾಲ ಕಾಲೊಗು ಮಸ್ತ್ ಗೊಬ್ಬುಲು ದುಂಬುಡ್ದ್ ಬೊಕ್ಕಲಾ ನಡತೊಂದು ಬೈದ್ಂಡ್. ಒಂಜಿ ಕಾಲೊಡು ರೇಡಿಯ, ಟಿ,ವಿ, ಮೊಬೈಲ್ ಪೂರ ದಾಂತಿನ ಸಮಯೊಡು ಖುಷಿಕ್ಕಾದ್ ಜನೊಕ್ಕುಲು ಗೊಬ್ಬು, ಅಂಕ, ಆಯನೊಲೆನ್ ಮಲ್ತ್ ಪೂರ ಒಟ್ಟು ಸೇರ್ದ್ ಖುಷಿ ಪಡೆಯೊಂತೆರ್. ಕಾಲ ಪೋಯಿಲೆಕ್ಕೊನೆ ಟಿವಿ, ಮೊಬೈಲ್ ಬತ್ತ್ಂಡ್, ಪಿದಾಯಿತ್ತಿ ಜನ ಉಳಯಿ ಸೇರೊಂಡೆರ್.
      ಗೊಬ್ಬುಲೆನ ಬದಲ್ ಗ್ ವೀಡಿಯೋ ಗೇಮ್, ಮೊಬೈಲ್ ಗೇಮ್ ಪೂರಾ ಬತ್ತ್ಂಡ್, ಬ್ಯಾಟ್ ಬಾಲ್ ಲಾ ಕೋಡಿ ಸೇರ್ದ್ಂಡ್.. ಆಂಡ ಆ ಗೊಬ್ಬುಲೆನ್ ನಮ ಮರತ್ ಬುಡಂದೆ, ಅವೆಕ್ಲೆನ್ ಪೂರಾ ಒರ ನೆನಪು ಮಲ್ತೊನ್ಗನಾ..

1.ಕುಂಟಬಿಲ್ಲೆ
  ಚೇಪಟ್ಟೆದ ಕಲ್ಲ್ ಅತ್ತ್ಂಡ ಓಡುದ ತುಂಡುನು ನೆಲಟ್  ಗೆರೆ ಪಾಡ್ದ್ ಮಲ್ತಿನ ಕೋಣೆದುಲಾಯಿ ದಕ್ಕ್ ದ್ ರಡ್ಡ್ ಕಾರ್ ಲಾ ಒಟ್ಟಿಗೆ ಪಾಡ್ದ್ ಲಾಗ್ಯೊಂದು ಪೋಪಿನ ಗೊಬ್ಬು ಅಂದು. ಒಂಜೆ ಕಾರ್ಡ್ ಕೋಣೆಡ್ದ್ ಕೋಣೆ ಲಾಗ್ಯೆರೆಲಾ ಉಂಡು. ಕಲ್ಲನ್ ದುಂಬುದ ಕೋಣೆಗ್ ಒಂಜೆ ಕಾರ್ ಡ್ ನೂಕೊಡು. ಆಂಡ ಕಲ್ಲ್ ಪಾಡ್ನಗ ಆವಡ್, ನೂಕ್ನಗ ಆವಡ್ ಗೆರೆಡ್ತ್  ಪಿದಾಯಿ ಪೋಂಡ ಆಯೆ ಆಟಡ್ತ್ ಔಟಾಪೆ.
2. ಕುಟ್ಟಿದೆಣ್ಣೆ
ಈ ಆಟ ಭಾರತದ ಮೂಲೆ ಮೂಲೆಡ್ಲಾ ಪುದರ್ ಪೋಯಿನವು. ಹಿಂದಿಡ್ ಆಮಿರ್ಖಾನ್ ನ ಒಂಜಿ ಪಿಕ್ಚರೆ ಉಂಡು ಉಂದೆತ್ತ ಬಗ್ಗೆ. ದೊಣ್ಣೆಡ್ ಕುಟ್ಟಿನ್ ಲಕ್ಕಾದ್ ರನ್ ಮಲ್ಲುನ ನಮ್ಮ ದೇಸೀ ಆಟ.
3. ಲಗೋರಿ-ಕಲ್ಲನ್ ಮೇಲ್ ಮೇಲ್ ಕಟ್ಟ್ ದ್ ಚೆಂಡ್ ಡ್ ಅವೆನ್ ಹಾಕ್ದ್ ಬೂರಾದ್ ಟೀಮ್ದಕ್ಲು ಎದ್ರ್ ಗುಂಪುದಕ್ಲೆನ ಚೆಂಡ್ಗ್ ತಿಕ್ಕಾಂದೆ ಬಲಿತ್ದ್ ಕಟ್ಟೊಡು.
  ಇಂಚಿನ ಗೊಬ್ಬುಲ್ನ ಒಟ್ಟಿಗೆ ಟಯರ್ ಬುಡ್ ಪಿನಿ, ಕೊತ್ಲಾಯ್ದ ಕ್ರಿಕೆಟ್, ತಪ್ಪುದ ಬೀಡಿ, ಖೋ,ಕಬಡ್ಡಿ, ಕಲ್ಲಾಟ ಪೂರಾ ನಮ್ಮ ಗ್ರಾಮೀಣ ಕ್ರೀಡೆಲು.
@ಪ್ರೇಮ್@

476. ಸುಗಿಪು-2


ಸುಗಿಪು

ಮನಸ್ ದ ಆಸೆಗ್ ಇಂಬು ಕೊರ್ ಲೆ
ಉಡಲ್ ದ ಮೋಕೆನ್ ದಿಂಜಾಲೆ
ಓ ಎನ್ನ ಉಡಲ ಅಪ್ಪೆ ಈರೆ
ಸುಗಿಪುವೆ ಇರೆನೆ ಮನಸಾರೆ...

ಮನಸಾರೆ ಮದಿಪುನು ಕೊರ್ದು ಕಾಪುಲೆ
ಬುಲಿಪು ದೂರ ಮಲ್ಪುಲೆ
ನರಮಾನಿಗೆಡ್ಡೆ ಬುದ್ಧಿ ಕೊರ್ಲೆ
ಬೆಂದ್ ತಿನ್ಪಿನ ಮನಸ್ ಕೊರ್ಲೆ..

ನಾಡ ಮಣ್ಣ್ ಡ್ ಮೋಕೆ ಬರಡ್
ಪೆದ್ದಿ ಅಪ್ಪೆನ್ ಎಡ್ಡೆ ತಾಂಕಡ್
ಹಿರಿಯಕ್ಲೆಗ್ ಮರ್ಯಾದೆ ಕೊರಡ್
ಒರಿಯಗೊರಿ ಪುಗೆಲ್ ಕೊರಡ್

ಮನಸ್ ದಿಂಜಿನ ಭಕ್ತಿ ಬರಡ್
ಅಮ್ಮ ಇರೆಡ ಮೋಕೆ ಉಪ್ಪಡ್
ಕತ್ತಲೆನ್ ಅವು ದೂರ ನೂಕಡ್
ಪಗೆಲ ಸೂರ್ಯನ ಬೊಲ್ಪು ಬರಡ್..
@ಪ್ರೇಮ್@

475. ಸುಗಿಪು

ಪ್ರಾರ್ಥನೆ

ಎಲ್ಯ ಕಬಿತೆಡ್ ಇರೆನ್ ಸುಗಿಪುವ
ಮಲ್ಲ ದೇವಿಯೆ ಈರೆನ್ ಮನಸ್ ಡೇ..

ಎಡ್ಡೆ ಮನಸ್ ನ್ ಕೊರುದು ಕಾಪುಲೆ
ಬದ್ ಕ್ ಗ್ ನೆಲೆ ಈರೆಯೇ..

ಇರೆನ ಜೋಕ್ಲೆನ ಸಾರ ತಪ್ಪುನು
ಮಾಪು ಮಲ್ಪುಲೆ ದೇವಿಯೇ

ಅಪ್ಪೆ ಪನ್ಪಿನ ಮೋಕೆ ಉಪ್ಪಡ್
ಎಂಕ್ಲೆಗೇಪಲ ಇರೆಡನೆ...

ರಡ್ಡ್ ಮನಸ್ ಗ್ ಜಾಗೆ ಬೊರ್ಚಿ
ಒಂಜೆ ಪನ್ಪಿನ ಬಾಳ್ವೆ ಬರಡ್

ಯಾನ್ಲ ಈಲ ಪನ್ಪಿ ಭಾವನೆ ಮರಪಡ್
ಎಡ್ಡೆ ಗೇನದ ನಡೆ ನಡಪಡ್

ಮಗೆಲ ಮಗಲ್ ಲ ಒಂಜೆ ಎನ್ನಡ್
ಜಾತಿ ಬೇದೊಳು ದೂರ ಪೋವಡ್
ರಾಜಕೀಯದ ರಂಗ್ ಮಾಜಡ್
ಗಂಟ್ ಕಟ್ಟುನ ಆಸೆ ದೂರಾವಡ್
@ಪ್ರೇಮ್@

474.missing

Missing

Missing of my health
Made me missing of
You all since weeks

Instead of you all
Met the doctor
Got advice to take rest
But no rest to stomach
So no rest to kitchen
As well as to clean
Washing and wiping..

Doctor suggested iron folic
Which was for me allergic
So the hemoglobin got
Angry on me,
reduced it's percentage

I could not walk properly
Cells lost their work
It lead to fever
Virus n bacteria played
Inside my body cells

Doctor's medicine worked
For only certain time
Virus were powerful
So they made me powerless

I was suffering with minutes
Workload as well as responsibilities..
Anyhow I am bit ok
Back to you again.
Your love and care
Made me great
As well as proud.
@prem@

473. ಮಕ್ಕಳ ಕವನ-4

ನಾಯಿಮರಿ

ನನ್ನ ಮುದ್ದು ನಾಯಿಮರಿ
ತಿನ್ನಲು ಬೇಕು ಮೂಳೆ ಬರೀ
ಹಾಡುವುವ ರಾಗ ಕುಂಯ್ ಕುಂಯ್
ಓಡುವ ಓಟ ಸುಂಯ್ ಸುಂಯ್.

ಚೆಂಡು ಬಾಯಲ್ಲಿ ಕಚ್ಚಿ
ತಂದು ತರುವುದು
ಊಟ ಖುಷಿಯಾದ್ರೆ ಮಾತ್ರ
ಶೇಕ್ ಹ್ಯಾಂಡ್ ಕೊಡುವುದು..

ಅಪ್ಪನನ್ನು ಕಂಡರೆ
ಓಡಿ ಬರುವುದು
ಅಮ್ಮ ಗದರಿದರೆ
ಮೂಲೆಗೆ ಓಡುವುದು

ಸೋಫಾದಲ್ಲೆ ಮಲಗಿಕೊಂಡು
ಗೊರಕೆ ಹೊಡೆವುದು
ಕನಸಿನಲ್ಲು ಕಳ್ಳ ಬಂದ್ರೆ
ಬೌಬೌ ಎನುವುದು..

ಹೊಸಬರನ್ನು ಕಂಡ ಒಡನೆ
ಬೊಗಳಿ ರಂಪ ಮೂಡುವುದು
ಮನೆಯವರ ನೋಡಿದೊಡನೆ
ಬಾಲ ಕುಣಿಸಿ ನಗುವುದು

ನನ್ನ ಮುದ್ದು ಟಾಮಿಯದು
ನನ್ನ ಮೊದ್ದು ಗೆಳೆಯನದು
ಟಾಮಿ ಬಿಟ್ಟು ಇರಲಾರೆ
ಗೆಳೆಯನ ನಾ ಅಗಲಲಾರೆ.
@ಪ್ರೇಮ್@

ಶುಕ್ರವಾರ, ಸೆಪ್ಟೆಂಬರ್ 21, 2018

472. ಸೋಲಿಗೆ ಸೋಲದಿರು

ಮನಕೆ

ಸೋಲದಿರು ಮನವೇ ನೀ
ಸೋಲಿನ ಸೋಲಿಗೆ..
ಸೋಲನ್ನು ಸೋಲಿಸಿ
ಸೋತವಗೆ ಬುದ್ಧಿ ಕಲಿಸಿ
ಸೋಲನು ಗೆದ್ದು ತೋರಸಿ
ಸೋಲಿಗೆ ಸೋಲುಣಿಸಿ ಬಾ..

ಮನವೇ ಸೋಲಲು ಬೇಕು
ಗೆಲುವ ರಸವ ಸವಿಯಲೊಮ್ಮೆ
ಸೋಲುಂಡಾಗಲೆ ಗೆಲುವಿನ
ಗೆಲುವ ವರಸೆ ತಿಳಿಯಲು..
ಸೋತರು ಎದೆಗುಂದದಿರು
ಸೋಲೇ ಗೆಲುವಿನ ಸೋಪಾನ..

ಸೋಲದೆ ನೀ ಗೆಲ್ಲಲಾರೆ ಮನವೆ
ಸೋತು ಗೆಲ್ಲಲು ಕಲಿ
ಸೋತು ಬಿಡು ಪ್ರೀತಿಯ ಸಲುವಾಗಿ
ನಲುಗದಿರು ಸೋಲಿಗಂಜಿ
ಸೋಲು ಗೆಲುವಿನ ಮೆಟ್ಟಿಲು
ಇಂದು ಸೋತವ ನಾಳೆ ಗೆಲ್ಲುವನು

ಸೋಲಿಗೆ ನೀ ಸೋತರೆ
ಸೋಲು ಸೋಲಿಸಿದೆನೆಂಬ
ಹಮ್ಮಿಂದ ಮೆರೆವುದು
ಸೋಲಬೇಡ ಸೋಲಿಗೆ
ಸೋಲು ನಿನ್ನ ಗೆಲ್ಲಿಸುವವರೆಗೆ
ಹೊಡೆದೋಡಿಸು ಸೋಲ

ಸೋತು ಸುಣ್ಣವಾದೆನೆನಬೇಡ
ಸೋತು ಗೆದ್ದೆನೆನುತಲಿರು
ಗೆದ್ದ ಗೆಲುವಲಿ ಬೀಗಬೇಡ
ಸೋಲು ಗೆಲುವುಗಳು
ಒಂದೆ ನಾಣ್ಯದೆರಡು ಮುಖಗಳು
ಜೀವನದ ಸೇತುವೆಗಳು..
@ಪ್ರೇಮ್@

*To my noble Mind*
Never fail dear mind
Never fail in the face of defeats
Defeat the failures and arrive
Showing the winning of failures

Dear mind..you must lose once to relish the sap of winning ...
You must lose once to know the skill of winning....
Never lose heart even if you fail
Failure itself is the ladder for success.

Dear mind...mind that you can not win before losing .
Learn to win after failing.
You fail for  love
Never tremble in the face failure.
Failure is the step to winning..
One who fails now, wins next time

If you lose heart when you fail...
The failure would shine over you with the temper that it defeated you.
Never be a loser until the failure would enables you to win .....and eventually you stamp out and drive away the failure.

Never benumbed by the failure....Sing the winning when you win over the failure..
Never be intoxicated by the thought that you won.
Success and failure are the two faces of the same coin
That bridges the shores of life.

Original: Prem.
Translated as meant : Tharanath

ಗುರುವಾರ, ಸೆಪ್ಟೆಂಬರ್ 20, 2018

471. ವಿಮರ್ಶೆಗಳು

[9/15, 12:57 PM] Wr Shiv Karnandi: ೧೦.
ಕವಯತ್ರಿ:ಪ್ರೇಮಾ ಉದಯ್
ಕವಿತೆ:ಬೇಕೆಮಗೆ

ಹೊಸತು ಬೇಕೆಂದು ಕವನ ಪ್ರಾರಂಭಿಸಿದ ಕವಯತ್ರಿ ಕೊನೆಗೆ ಹೊಸತು ಹಳತು ಎರಡರ ಮಿಶ್ರ ಕಲೆತಾಗಲೇ ಜೀವನ ಅರ್ಥವತ್ತಾಗುತ್ತದೆ ಎಂದು ಕೊನೆಗೊಳಿಸುತ್ತಾರೆ.

ಸರಳ ಸುಂದರ ಕವನ

ನಿತ್ಯ ಬರೆಯುತ್ತಿರಿ,ಶುಭವಾಗಲಿ

ಶಿವಕುಮಾರ ಮೋ ಕರನಂದಿ✍🏻
[9/17, 4:14 PM] ‪+91 70228 75456‬: ಪ್ರೇಮ್ ರವರ ಬೆಳಗಾಗಲಿ ಚೆನ್ನಾಗಿದೆ. ಪ್ರಕೃತಿಯ ಉಳಿಸಿಕೊಳ್ಳು
ವಲ್ಲಿ ನಾವೆಲ್ಲಾ ಶ್ರಮ ಪಡಬೇಕಿದೆ.
ನಿಮ್ಮ ಕಳಕಳಿಯ ಕವನ ಸುಂದರ.👍👍🙏🙏🌹
[9/18, 7:54 PM] ‪+91 77601 44996‬: ಪ್ರೇಮ್  ಅವರ
ಕ್ಷಮಿಸೆಮ್ಮನು
ಪ್ಲಾಸ್ಟಿಕ್  ಹಾವಳಿಯ  ನೈಜ ಚಿತ್ರಣ,  ಇದಕ್ಕೆ  ಕ್ಷಮೆ ಇದೆಯಾ?
[9/19, 2:17 PM] ‪+91 70228 75456‬: ಪ್ರೇಮ್ ರವರ ಬದುಕು,ಸಾವು
ಅತ್ಯಂತ ಮನಕಲಕುವ ಕವನ ಹೌದು
ಕೆಲವರು ಹಾಗೇ ಕೋಳಿಗಳ ತರಹ
ತಮ್ಮ ಕಾಯಕ ತಾವು ಮಾಡುತ್ತಿರುತ್ತಾರೆ ಯಾವ ಪ್ರತಿಫಲಾಪೇಕ್ಷೆಯಿಲ್ಲದೆ. ಸುಂದರವಾಗಿದೆ. ಮನಮುಟ್ಟಿತು.
ಧನ್ಯವಾದಗಳು.🙏🙏🙏🙏🌹🌹
[9/19, 4:54 PM] ‪+91 81475 09143‬: @ಪ್ರೇಮ್ ಸರ್...

*ಬದುಕು ಸಾವು*

ಕೋಳಿಯ ಜೀವನವನ್ನು ಬಲು ಚಂದವಾಗಿ ಬರೆದಿದ್ದೀರಾ..!

ಯಾವುದಕ್ಕೂ ಕೋಳಿ ಹೆದರದಿದ್ದುದ್ದು ಒಂದು ಚಂದದ ಜೋಡನೆಯನ್ನು ನೀವು ಇಲ್ಲಿ ಮಾಡಿದ್ದೀರಾ..

ಕೋಳಿಯ *ಗೋಳು ಕೇಳುವರಿಲ್ಲ*
ಸತ್ತ ಕೋಳಿಯ ಸಂಬಂಧಿಕರು ಅಳಲಿಲ್ಲ..
ತಿಂದವರು ಅಬ್ಬರಿಸಿ ತಮ್ಮ ತೃಪ್ತಿಯನ್ನು ಬಿಚ್ಚಿಟ್ಟರು.

*ಸತ್ತ ಕೋಳಿಯ ಕಡೆಯವರು ತಿಥಿ ಮಾಡಲಿಲ್ಲ* ಇದೆಲ್ಲ ನೋಡಿದಾಗ ಪಾಪ ಅಂತ ಅನಿಸಿದ್ರು ಬಿಡೋದಿಲ್ಲ ಯಾರು .
ಅದು ಲೋಕ ರೂಢಿಯಾಗಿ ಬಂದು ಬಿಟ್ಟಿದೆ.
*ಮೌಂಸ ಎಂದರೆ ಈಗ ಹಬ್ಬದಡುಗೆ*
ಈಗ ಅದು ಬಲು ಜೋರು.

ಪ್ರಾಣಿಗಳಿಗೆ ಮನುಷ್ಯನ ಮನಸ್ಸನ್ನು ಆಯುವ ಇಲ್ಲವೇ ಆರ್ಥ್ಯಯ್ಸಿಕೊಳ್ಳುವ ಶಕ್ತಿ ಇದ್ದಿದ್ದರೆ ಮನುಷರನ್ನೇ ನಾಶ ಮಾಡುತ್ತಿದ್ದವು.ಇಲ್ಲವೇ ತಮ್ಮ ಸಂತತಿಯನ್ನೇ ತಾವೇ ಅಳಿಸಿಕೊಂಡು ಬಿಡುತ್ತಿದ್ದವು.

ಕೋಳಿ ಪಾಡು ಇಲ್ಲಿ ಪಾಪ..

*ಮೊಟ್ಟೆಯೊಳಗೆ ಇರುವಾಗ ಎನುತಾನೆ ಹೇಳಿತು ಕೋಳಿ ಮರಿ ಏನು ತಾನೇ ಹೇಳಿತು ಕೋಳಿಮರಿ*....
ಪ್ರಪಂಚವ ನೋಡುತ್ತೇನೆ ಅಂತ....
ರೆಕ್ಕೆ ಪುಕ್ಕ ಕೀಳುವಾಗ ಹೇಳಿತು ಕಟ್ಟಿಂಗ್ ಮಾಡಿಕೊಂಡೆ ಅಂತ...
*ಎಣ್ಣೆಯಲ್ಲಿ ಬಿಡುವಾಗ ಹೇಳಿತು ಎಣ್ಣೆ ಸ್ನಾನ ಮಾಡಿಕೊಂಡೆ ಅಂತ...*
ಮಸಾಲೆ ಹಾಕುವಾಗ ಹೇಳಿತು ಕೋಳಿ ಮರಿ...
*ಪೌಡರ್, ಸೋಪ್, ಚಂದಕ್ಕೆ ಅಂತ ಹೇಳಿತು*
ಹೊಟ್ಟೆಯಲ್ಲಿ ಹೋಗುವಾಗ ಹೇಳಿತು ಕೋಳಿ ಮರಿ...
*ಇಷ್ಟೇನಾ ಪ್ರಪಂಚ ಇಷ್ಟೇನಾ ಪ್ರಪಂಚ ಅಂತ*

ಈ ರೀತಿಯಾಗಿ ಇದೆ ಕೋಳಿ ಜೀವನ.
ಆದರೂ ಕೋಳಿ...ಚಂದ  😜

*ಚುಪರ್* 😊😊
[9/20, 12:37 PM] ‪+91 77605 94239‬: ಪ್ರೇಮ ಸರ್ ಅವರ

ಜನಮನ

ವಾಸ್ತವ ಸತ್ಯ ಸರ್ ವಾಸ್ತವವನ್ನೆ ಸುಂದರ ಸಾಲುಗಳಲ್ಲಿ ಕಟ್ಟಿ ಹಾಕಿದ್ದೀರಿ

ತಂತ್ರಜ್ಞಾನದ ಹಾವಳಿಯಿಂದ ಎಲ್ಲವೂ ಕೂಡ ಮೌನವಾಗಿದೆ
ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ
ನೆಮ್ಮದಿ ಮಾಯವಾಗಿದೆ
ನಗು ನಲಿವಿನ ನೆಮ್ಮದಿಯ ಜೀವನವೇ ಸತ್ತು ಹೋಗಿದೆ
ಜೊತೆಯಲ್ಲಿದ್ದರೂ ಕೂಡ ಮುಖಕೊಟ್ಟು ಮಾತನಾಡುವಷ್ಟು ಪುರುಸೋತ್ತಿಲ್ಲ ಅನ್ನೋ ಹಾಗೆ ತಂತ್ರಜ್ಞಾನ ನಮ್ಮಣ್ಣ ಆವರಿಸಿಕೊಂಡಿದೆ

ವಾಸ್ತವ ಅಂಶವನ್ನು ಒಳಗೊಂಡ ನಿಮ್ಮ ಕವನ ಸುಂದರ ಸಾಲುಗಳಲ್ಲಿ ಸೊಗಸಾಗಿ ಮೂಡಿಬಂದಿದೆ ಧನ್ಯವಾದಗಳು ತಮಗೆ
[9/20, 3:41 PM] ‪+91 98456 06959‬: ಪ್ರೇಮ್ ರವರೇ ನನ್ನೆಲ್ಲ ಭಾವಗಳ ಅದ್ಭುತ ವಾಗಿ ಗ್ರಹಿಸಿ ಪರಕಾಯ ಪ್ರವೇಶ ಮಾಡಿದ್ದೀರಿ.ಇಂದು ನನ್ನ ಕವನ ಸಾರ್ಥಕ.ಬೆಳಗಿನ ಅವಸರದಲ್ಲಿಯೇ ಅವಸರವಾಗಿ ಬಂದ ಭಾವಗಳಿಗೆ ನಾನು ಋಣಿ.
ಪದಪದವನ್ನೂ ಸುಂದರವಾಗಿ ವಿಶ್ಲೇಷಣೆ ಮಾಡಿ ಚೆಂದದ ಭಾವ ಲಹರಿಯನ್ನೇ ಮರು ಸೃಷ್ಟಿಸಿದ್ದೀರಿ.ತಮಗೆ ಹೃದಯ ಪೂರ್ವ ಕ ಧನ್ಯವಾದಗಳು. ತಮಗೆ ಉಂಟಾಗಿರುವ ಸಂತಸಕ್ಕೆ ನನ್ನ ಕವನ ಕಾರಣವಾಗಿರುವುದು ನನಗೆ ಹೆಮ್ಮೆ.
🙏🙏🙏🙏🌹🌹🌹
*ಧನ್ಯವಾದಗಳು ಸರ್*
*ಜೆ.ಕೆ* .
[9/21, 9:13 AM] Wr Shiv Karnandi: ಅದ್ಬುತವಾಗಿ ವಿಮರ್ಶೆ ಮಾಡಿದ್ದಿರಿ ಪ್ರೇಮಾ ಮೇಡಂ.....

ನಿಮ್ಮ ವಿಮರ್ಶೆ ಇಷ್ಟವಾಯ್ತು.....