ಗುರುವಾರ, ಸೆಪ್ಟೆಂಬರ್ 6, 2018

450. ನಡೆಮುಂದೆ

ನಡೆ ಮುಂದೆ

ಭೂಮಿಯೂ ಒಂಟಿ ಸೂರ್ಯನೂ ಒಂಟಿ
ನಡೆಸುವರು ಜೀವಜಂತುಗಳ ಜೊತೆಗೆ  ಅಂಟಿ
ಕೊರಗಬೇಡಿ ಜೀವನದಿ ತಾನು ಒಬ್ಬಂಟಿಯೆಂದು
ಸಾಧನೆಗೆ ಒಬ್ಬನೇ ನೀ ಸಾಗು ಮುಂದು..

ನಡೆ ಮುಂದೆ, ಓಡು, ಸಾಗಲು ಗುರಿಯೆಡೆ
ಒಡ ಹುಟ್ಟಿದವನೂ ಬರನು ನೂಕಲು ಮುಂದುಗಡೆ
ಏನಾದರಾಗಲಿ ಸಮಯದೊಡನೋಡು
ಜೀವನದ ಸುಖವ ನೀನೆ ಕಾಪಾಡು..

ಮನದಾಳದ ಬಯಕೆಗಳ ಈಡೇರಿಸೆ ಹೋರಾಡು
ಪ್ರೀತಿ ಪ್ರೇಮದಿ ಕುಟುಂಬದಲಿ ಸುಖಪಡು
ನಾನು ನನ್ನದು ಎನ್ನಲು ಏನಿದೆ
ಸಾಧನೆ ನಾವು ಮಾಡಲು ಕಾದಿದೆ..

ಬದುಕ ಗಾಡಿಯ ಓಡಿಸೆ ಒಡನೆ
ಮನವಿಹುದು ನಿನ್ನಯ ನಿನ್ನೊಡನೆ
ಹಗಲಲಿ ನೆರಳು ಇರುಳಲಿ ಕನಸು
ದೇವನು ಜತೆಗಿಹ ಇರಲು ಮನಸು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ