ಬುಧವಾರ, ಸೆಪ್ಟೆಂಬರ್ 12, 2018

457.ಜಗವೆ

ಜಗವೇ ...

ಓಡುವ ನದಿಯದು ನಿಲ್ಲದು ಎಂದೂ
ಬೀಸುವ ಗಾಳಿಯು ಕಾಣದು ಬಂದು
ಮನದಲಿ ಅಡಗಿಹ ಭಾವವೆ ವಿಸ್ಮಯ
ಓದಲು ಆಗದು ಹೃದಯದ ಆಲಯ

ಭುವಿಯದು ತಿರುಗಿ ತರುವುದು ಬೆಳಕು
ಮನದಾನಂದ ಎಲ್ಲ ಜೀವಸಂಕುಲಕು
ಚಂದಿರನಾಗಮ ನಿಶೆಯಲಿ ಝಲಕು
ರವಿ- ಸೋಮರ ಗೆಳೆತನ ಭುವಿಯ ಕಡೆಗು

ಜಗವದು ಆಗರ ತರತರ ಜೀವಕೆ
ಕಣ್ಣಿಗೆ ದೃಷ್ಠಿಯ ಬಣ್ಣವದೇತಕೆ
ಮರಗಿಡ ಬಳ್ಳಿಗು ಜೀವದ ಕೊಡುಗೆ
ಭರವಸೆಯಿರಲಿ ತನ್ನದೆ ನಡೆಗೆ..

ತಾರೆ ನೀಹಾರಿಕೆ ಪುಂಜ ಗುಚ್ಛ
ಕಣದಲಿ ಅಣುವದು ಶಕ್ತಿಯು ಉಚ್ಛ
ಗಾಳಿಯು ಸೇರಿ ನೀರಿನ ಜನನ
ಹುಟ್ಟಿಹ ಜೀವಿಗೆ ಒಮ್ಮೆಗೆ ಮರಣ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ