ಮಳಿರಾಯ
ಹುಯ್ದಾನ ಮಳಿರಾಯ ಹುಯ್ಯೋ ಹುಯ್ಯೋ
ಬೆಳಿಸ್ಯಾನ ಬೆಳಿಯನ್ನ ಸುಯ್ಯೋ ಸುಯ್ಯೋ//
ಗುಡುಗನ್ನೂ ಹೊತ್ತು ತಂದಾನ
ಮಿಂಚನ್ನೂ ಮಿಂಚಿಸ್ಯಾನ
ಕೋರೆ ಹಲ್ಲನ್ನ ಬಿಟ್ಟಾನ...
ಕೋರೆ ಹಲ್ಲನ್ನು ಬಿಟ್ಟಾನ ಮಳಿರಾಯ
ಸುರಿದು ನೀರನ್ನು ತುಂಬ್ಯಾನ..
ಬೇಸಿಗೆ ಬಿಸಿಲನ್ನ ಮರೆಸ್ಯಾನ
ಹಳ್ಳ ಕೊಳ್ಳ ಕೆರಿಗಳ ತುಂಬ್ಯಾನ
ಗಿಡ ಮರ ಬಳ್ಳಿಯ ಒದ್ದೆ ಮಾಡ್ಯಾನ..
ಗಿಡ ಮರ ಬಳ್ಳಿಯ ಒದ್ದೆ ಮಾಡ್ಯಾನ ಮಳಿರಾಯ
ಪಶುಪಕ್ಷಿಗೂ ನೀರ ಉಣಿಸ್ಯಾನ..
ಮೀನಿಗೆ ಖುಷಿಯನು ತಂದಾsssನ
ಏಡಿಗೆ ಸಂತಸ ಕೊಟ್ಟಾsssನ
ನವಿಲನ್ನ ನಾಟ್ಯಕ್ಕ ಕರೆದಾನsss..
ನವಿಲನ್ನ ನಾಟ್ಯಕ್ಕೆ ಕರೆದಾನ ಮಳಿರಾಯ
ನನ್ನ ನಿಮ್ಮ ಹೊರಗ ಕರೆದಾನsss
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ