ಗುರುವಾರ, ಸೆಪ್ಟೆಂಬರ್ 6, 2018

449.ಮಾನವ

ಮಾನವ

ಡಾರ್ವಿನನ ವಿಕಾಸವಾದದಂತೆ
ಮಂಗನಿಂದ ಮಾನವನಾದನಂತೆ
ಕಾಣುವುದು ಅದೀಗ ಸರಾಗ
ಕಿತ್ತು ತಿನ್ನುವ ಹಲವರ ವರಾತ

ತಾನು ತನ್ನದೆಂಬ ಬುದ್ಧಿ ಮಂಗನಿಗಿಲ್ಲ
ತಾನಿರುವ ಕಾಡಿನ ಹಣ್ಣು ಬೇರು ಹೂ ಕಾಯಿಗಳ
ಹಂಚಿ ತಿನ್ನುವುವಲ್ಲ....
ಮಾನವನೇನು! ಅದೆಲ್ಲ ಬಲ್ಲ!!

ಹೇಳುವುದು ಶಾಸ್ತ್ರ ಇಕ್ಕುವುದು ಗಾಳ
ಮಾತಲಿ ಮಮಕಾರ ಬಿರುಸಿನ ಸತ್ಕಾರ
ಎದೆಯಲಿ ಬರಬರ ಮೆಣಸಿನ ಉರಿಕಾರ
ಕೋತಿ, ಪ್ರಾಣಿ ಪಕ್ಷಿಗಳು ಹಾಗಿಲ್ಲ!!

ಕಾಡ ಕಡಿದು ಹಾಳು ಮಾಡಿ
ಪಶು ಪಕ್ಷಿಯ ಮನೆ ಬರಿದು ಮಾಡಿ
ಊರೊಳಗೆ ನುಗ್ಗಿದಾಗ ಗುಂಡಿಕ್ಕಿಕೊಂದು
ಸರಕಾರದಿ ಪರಿಹಾರ ಕೇಳವು ಪ್ರಾಣಿಗಳೆಂದು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ