ಇಹುದು ನಂಬಿಕೆ
ಗಾಳಿ ಕದಡಿಡೆ ನೀರು ವಿಷವಾಗಿದೆ
ಮಣ್ಣು ವಿಷವಾಗಿದೆ ಧರೆಯು ಹಾಳಾಗಿದೆ
ಎಂದೆಂಬರು ಜನ ತಾವೆ ಕೆಡಿಸಿ ಧರಿತ್ರಿಯ
ನಮಗೇನೋ ಭರವಸೆ ಇಳೆ ನಿನ್ನ ಮೇಲೆ..
ತಾರೆಗಳೂ ಸಾಯುವುವಂತೆ
ಸಾವಿರಾರು ವರುಷದ ಬಳಿಕ
ಸ್ಫೋಟಗೊಂಡು ಕುಬ್ಜವಾಗಿ
ನಮಗೇನೋ ನಂಬಿಕೆ ರವಿ ನಿನ್ನ ಮೇಲೆ....
ಮರಗಳೆಲ್ಲ ಉರುಳಿದ ಬಳಿಕ
ಭೂತಾಯಿ ಬಿಸಿಯೇರುವಳಂತೆ
ಧ್ರುವದ ಹಿಮ ಕರಗುವುದಂತೆ
ನಮಗೆಲ್ಲಾ ಕಾವ ಹಿಮಾಲಯದ ಮೇಲೆ..
ಸಾಗರವು ಉಕ್ಕುವುದಂತೆ
ವಿಷವಾದ ಜಲ ಕೊಲ್ಲುವುದಂತೆ
ಜಲಪ್ರಳಯ ಬರುವುದಂತೆ
ಆದರೂ ಸಾಗರ,ಕೊಲ್ಲಿ ಸಮುದ್ರಗಳೆ ಆಸರೆ ನೀವೆಮಗೆ
ಉಕ್ಕಿ ಹರಿಯದಿರಿ ಭಾರತಿಯೆಡೆಗೆ
ಉಳಿಸೆಮ್ಮ ನಂಬಿಕೆಯ ನಿಮ್ಮೆಡೆಗೆ
ಭಯದಿ ಭವದಿ ಬದುಕುವ ಬಾಳಿಗೆ.
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ