ಕಾಲ
-:ಅಂದು:-
ಒಂದು ಕಾಲವಿತ್ತು
ಸಂಬಳ ದೊರೆತೊಡನೆ ಬ್ಯಾಗಿನಲ್ಲಿ ಹಣ
ಪರ್ಸಿನಲ್ಲೂ ಹಣ, ಖುಷಿಯೋ ಖುಷಿ!
ಅಂದು ಶಾಪಿಂಗ್ ಏನೂ ವಾರೆವಾ
ವ್ಯಾಪಾರದ ಭರಾಟೆಯೋ ಭರಾಟೆ
ವಿವಿಧ ಚಪ್ಪಲಿ, ಬ್ಯಾಗು, ಸೀರೆ, ಬಳೆ
ಶೃಂಗಾರದ ಸರಕುಗಳು ಅನೇಕಾನೇಕ
ಅಂಗಡಿಯಲ್ಲಿ ಚೌಕಾಸಿಯೇನು!
ಸಂತಸವೇನು... ಸಡಗರವೇನು..
-: ಇಂದು:-
ಸಂಬಳ ಬಂತು ...ಹೋಯ್ತು..
ಕೈಗೆ ಬಂದ ತುತ್ತು ಬಾಯಿಗೆ ಬರದು
ಡಿಜಿಟಲ್ ಯುಗ ಟೆಕ್ನಿಕಲ್ ಯುಗ!
ಬಾಡಿಗೆ ಹೋಯ್ತು ಮನೆ ಲೋನ್ ಕಟ್
ಬಡ್ಡಿ ಹೋಯ್ತು ಕರೆಂಟ್ ಬಿಲ್ ಕಟ್
ರೀಚಾರ್ಜ್ ಆಯ್ತು ಪೇಮೆಂಟ್ಸ್ ಆಯ್ತು..
ಆನ್ ಲೈನಲ್ಲೆ ಬಟ್ಟೆ ಸಾಮಾನು ಬಂತು!
ಬ್ಯಾಲೆನ್ಸ್ ಸೊನ್ನೆ ಆಯ್ತು
ದುಡ್ಡು ನೋಡಲಿಲ್ಲ, ಕೈಲಿ ಕಣ್ಣಲ್ಲಿ!
ಬಂತು, ಖರ್ಚಾಯ್ತು ಮುಗೀತು!
ಮತ್ತೆ ಮುಂದಿನ ಸಂಬಳಕ್ಕಾಗಿ ದುಡಿ!
ದುಡ್ಡಿಗಾಗಿ ಯಾವ್ ಯಾವ್ದೋ ದಾರಿ ಹಿಡಿ!!!!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ