ಮನವರಳಲಿ
ಬಿತ್ತೋಣ ಸಂತೋಷವ
ಮನದಗಲದ ತೋಟದಲಿ
ಹರಡೋಣ ಗೊಬ್ಬರವ
ಪ್ರೀತಿಯೆಂಬ ಬೇರಿಗೆ
ಹಾಕೋಣ ಕರುಣೆ ನೀರ
ಬೊಗಸೆ ತುಂಬ ಚೆಲ್ಲಿ..
ಹರವೋಣ ಸಹಾಯಹಸ್ತ
ಬಡಜನರಿಗೆ ಇಲ್ಲಿ
ಹೃದಯವರಳಿ ಹೂವಾಗಿ
ಮನದಾನಂದ ಬೆಳಗಿ
ಬದುಕರಳಿ ನಸುನಗೆಯು
ಎಲ್ಲೆಲ್ಲು ಚೆಲ್ಲಿ...
ನಮ್ಮೆಲ್ಲ ಆಸೆಗಳು
ನೆರವೇರಲು ಕಷ್ಟ
ನಾವ್ ಬಯಸುವ ತರವೇ
ನಾವ್ ಬಾಳುವುದಿಷ್ಟ..
ಕಷ್ಟದ ಜೀವನದಿ
ಬದುಕದು ಸಂಕಷ್ಟ..
ಮನವಿರಲು ಮುಗ್ಧ
ಬಾಳು ಎಂದೂ ಸ್ನಿಗ್ಧ
ಬರಡಾಗದು ಬಾಳು
ಮನವದು ಬೆಳಗಲು
ಮನವರಳಲಿ ಹೀಗೆ
ಚುಕ್ಕಿ ಚಂದ್ರರ ಹಾಗೆ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ