ಶುಕ್ರವಾರ, ಸೆಪ್ಟೆಂಬರ್ 7, 2018

451. ಕೋರಿಕೆ

ಕೋರಿಕೆ
ಕಡಿಯದಿರು ಮಾನವ ಹಸಿರು ವೃಕ್ಷಗಳ
ಬೆಳೆಸುತಿರು ಗಿಡಮರ ಬಳ್ಳಿಗಳ
ಅಳಿಸಬೇಡವೊ ಹಸಿರ ಸಿರಿಯ
ತುಂಬದಿರು ರಾಸಾಯನಿಕಗಳ ತೊಟ್ಟಿಯ

ಬೆಳೆಸದಿರು ಕಾಂಕ್ರೀಟ್ ಕಾಡುಗಳ
ಉಳಿಸುತಿರು ಪಶುಪಕ್ಷಿ ಪ್ರಾಣಿಗಳ
ಜೀವ ಸಂಕುಲವಿರಲಿ ನನ್ನೊಡಲಲ್ಲಿ
ಬದುಕು ಸಾಗುತಲಿರಲಿ ನೋವು ನಲಿವಿನಲಿ

ಉಳಿಸು ಮುಂದಿನ ಜನಾಂಗಕೆ
ಶುದ್ಧ ನೀರು,ಹಿತಗಾಳಿ ಉಸಿರಾಟಕೆ
ಬುದ್ಧಿ ಬರಲಿ ಪ್ರಕೃತಿಯ ಉಳಿಸಲು
ಇಲ್ಲದಿರೆ ಗೊತ್ತು ಸರ್ವನಾಶಗೊಳಿಸಲು..

ನನ್ನೀ ವಿನಂತಿಯ ಪಾಲಿಸು ಮನದಲಿ
ನಿನ್ನ ಬಾಳು ಹಸನಾಗುವುದು ಭುವಿಯಲಿ
ಹೀಗೇ ಮುಂದುವರಿದರೆ ನಿನ್ನ ಅನಿಷ್ಟ ಕಾರ್ಯ
ನಿನ್ನ ಸರ್ವನಾಶ ನನಗನಿವಾರ್ಯ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ