ಭಾನುವಾರ, ಸೆಪ್ಟೆಂಬರ್ 9, 2018

452.ಋಣ

ಋಣ

ಸೂರ್ಯ ಚಂದ್ರಾದಿಯಾಗಿ
ಗ್ರಹ ನಕ್ಷತ್ರಗಳೂ
ಪಂಚ ಭೂತಗಳೂ ಮಾನವನ
ದುರಾಸೆಯ ದುಶ್ಚಟಕ್ಕೆ
ಬೇಲಿ ಹಾಕಲು ಪಣತೊಟ್ಟು
ನಿಂತ ಹಾಗಿದೆ..

ವರುಣನಾರ್ಭಟ ಮುಗಿದೊಡನೆ
ವಾಯುದೇವ ತೋರಿಸಿದ
ತನ್ನ ಕೈಚಳಕವ..
ಅಗ್ನಿಯ ಪ್ರತಾಪ ಕೇಳಬೇಕೆ?
ಆಗಾಗ ಅವಘಡ ಮಾಮೂಲು

ಆಕಾಶ ಸುರಿಸುವುದು ಆಮ್ಲ ಮಳೆಯ
ನೀರು ಹರಿವುದು ಕೊಚ್ಚಿಕೊಂಡು
ಭೂತಾಯಿಯ ಕೊಳೆಯ..

ಸೂರ್ಯ ನೆತ್ತಿಯ ಮೇಲೆ
ಸುಡುತಿಹನು ಅಗ್ನಿಯಂತೆ
ನಡೆಯಲಾಗದು ಜನಕೆ
ಬಿಸಿಲ ಧಗೆಯಲಿ
ಈ ಹಿಂದೆ ನಡೆದಂತೆ..

ಮಾನವನ ಕಾರ್ಯ ಮನುಕುಲಕೇನು
ಜೀವ ಸಂಕುಲಕೇ ಅವಮಾನ
ತೆರಬೇಕು ಜೀವಯಾನ
ತನ್ನೆಲ್ಲಾ ಋಣ
ಭೂತಾಯನುಳಿಸುವ ಸಲುವಾಗಿ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ