ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-12
ನನ್ನ ಗೆಳತಿಯೊಬ್ಬಳಿದ್ದಳು. ಹೆಸರು ಮಮತಾಝ್ ಎಂದಿರಲಿ. ಗೊತ್ತಿಲ್ಲದೆಯೇ ಹಿಂದೂ ಹುಡುಗನೆಬ್ಬನನ್ನು ಪ್ರೀತಿಸಿ ಬಿಟ್ಟಳು. ಈಗಿನ ಹಾಗೆ ಆಗೆಲ್ಲಾ ಕೋಮು ಗಲಬೆಗಳಿರಲಿಲ್ಲ. ಜಾತಿ- ಮತ-ಧರ್ಮವನ್ನು ಮೀರಿದ ಪರಿಶುದ್ಧವಾದ ಹೃದಯದ ಪ್ರೀತಿಯದು. ಕುಟುಂಬದಲ್ಲಿ ಕಲಹಗಳಾದರೂ ಇಬ್ಬರೂ ಒಬ್ಬರನೊಬ್ಬರು ಬಿಟ್ಟಿರಲಾರದವರಾಗಿದ್ದರು. ಕುಟುಂಬ, ಸಂಸಾರದವರು ಅಲ್ಲಗಳೆದರೂ, ಜರಿದರೂ ಗೆಳೆಯರು ಜತೆಗಿದ್ದರು.ಹಾಗಾಗಿ ಅವರಿಬ್ಬರೂ ಪ್ರೀತಿಯೊಡನೆ ಸತ್ತು ಲೈಲಾ-ಮಜ್ನೂ ಆಗಲಿಲ್ಲ, ಬದಲಾಗಿ ಪ್ರೀತಿಯನ್ನು ಗೆದ್ದು, ಬದುಕಿ, ಬಾಳಿ ಜಾತಿ-ಮತ ಧರ್ಮಗಳಿಗಿಂತ ಪ್ರೀತಿ ಮೇಲೆಂಬುದನ್ನು ಸಾಬೀತುಪಡಿಸಿದರು!
ಗೆಳೆಯರ ಸಹಕಾರದಿಂದ ಮನೆಬಿಟ್ಟು, ಗೆಳೆಯರೊಂದಿಗಿದ್ದರು, ಹೇಗಾದರೂ ಮೊದಲು ಮದುವೆಯಾಗಿ ಒಬ್ಬರನೊಬ್ಬರು ಸೇರಬೇಕಿತ್ತು, ಆ ಮೇಲೆ ಯಾರೂ ನಮ್ಮನ್ನು ಈ ಜಗದಲಿ ಬೇರ್ಪಡಿಸಲು ಸಾಧ್ಯವಿಲ್ಲವೆಂಬ ನಂಬಿಕೆ ಅವರಿಗಿತ್ತು. ಕಾನೂನಿನ ಪ್ರಕಾರ ಮದುವೆಯಾಗಲು ಧರ್ಮ ಒಂದೇ ಆಗಿರಬೇಕು, ಅಲ್ಲಿ ಪ್ರೀತಿಗಿಂತ ಧರ್ಮ ಮುಖ್ಯ, ಹಾಗಾಗಿ ಮಮ್ತಾಝ್ ಮಮತಾ ಆದಳು! ಮದುವೆ ಆಯಿತು! ಗೆಳೆಯರ ಸಮ್ಮುಖದಲ್ಲೆ..
ಸಂಸಾರ ಸಾಗರ ಸಾಗಿತು! ಬೆಂಗಳೂರು ನಗರ ಕೈಬೀಸಿ ಕರೆಯಿತು, ದುಡಿವವಗೆ ಕೆಲಸ ಕೊಡುವಾಸೆಯಿಂದ! ಮಮತಾ ಪೂಜೆ ಮಾಡಲು ಕಲಿತಳು! ಭಕ್ತಿ, ಭಾವದಿಂದ ಎಲ್ಲಾ ಧರ್ಮಗಳನ್ನೂ ಗೌರವಿಸುತ್ತಿದ್ದರು ಅವರು. ರಾಜಕೀಯ, ಸಣ್ಣ ವ್ಯಾಪಾರ, ಮಹಿಳೆಯರ ಸ್ವ ಸಹಾಯ ಗುಂಪು, ಖಾಸಗಿ ಕಂಪನಿ ಹೀಗೆ ಹಲವಾರು ಕಡೆ ದುಡಿದು ಗಳಿಸಿದರು.
ಮಮತಾ ತನ್ನ ಅತ್ತೆ, ಮಾವ, ಮೈದುನರನ್ನು ಚೆನ್ನಾಗೇ ನೋಡಿಕೊಂಡಳು. ಆದರೂ ನಿಂದಿಸಿದಾಗ ಬೆಂದಳು!
ಗಂಡನ ಮನೆಯವರಿಗೆ ಬಂದ ಹುಡುಗಿ ಏನು ಮಾಡಿದರೂ ತಪ್ಪು, ಏನು ಮಾಡದೆ ಸುಮ್ಮನಿದ್ದರೂ ತಪ್ಪು! ಆದರೆ ಮಮತಾ ಎಲ್ಲರನ್ನು ನಿಭಾಯಿಸಿ ಸೈ ಅನಿಸಿಕೊಂಡಳು!
ಮುದ್ದಾದ ಮಗು ತನ್ವಿಗೆ ಜನ್ಮ ನೀಡಿದಳು. ಮೈದುನನ ವ್ಯಾಪಾರಕ್ಕೆ ನೆರವಾದಳು. ತಮ್ಮನಿಗೆ ಕಷ್ಟ ಬಂದಾಗ ನೆರವಿನ ಹಸ್ತ ಚಾಚಿದಳು. ಅಕ್ಕ ಅಕಸ್ಮಾತಾಗಿ ತೀರಿಕೊಂಡಾಗ ಅವರ ಮಕ್ಕಳನ್ನೂ ಸಾಕಿದಳು!
ಪೇಶೆಂಟಾದ ಅಮ್ನನನ್ನೂ ನೋಡಿಕೊಳ್ಳತೊಡಗಿದಳು...
ಚೆನ್ನಾಗಿ ಬದುಕಿ ರಾಗ ಹಾಡುತ್ತಿದ್ದ ಕುಟುಂಬವು ಪ್ರವಾಹಕ್ಕೆ ತುತ್ತಾದಂತೆ ಆಯಿತು! ಎರಡನೆ ಹೆರಿಗೆಯಲ್ಲಿ ಮಮತಾ ಇಹಲೋಕ ತ್ಯಜಿಸಿದಳು! ಗಂಡ ಮಗುವಿಗಾಗಿ ಚೆನ್ನಾಗಿದ್ದಾನೆ.
ಪ್ರಪಂಚ ಬೆಳಗಲು ಇಂತಹ ಮಹಾನ್ ಪ್ರೇಮಿಗಳು ಸಾಕು, ನೀವೇನಂತೀರಿ?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ