ಬೆಳಗಾಗಲಿ...
ಬೆಳಗಾಗಲಿ ಬಾಳ ಬಳ್ಳಿಯಲಿ
ಇರುಳ ಕತ್ತಲನೋಡಿಸುತಲಿ
ಗಿಡಮರವ ಕಡಿದುರುಳಿಸದಿರೆ
ಬುವಿಗೆ ಪ್ಲಾಸ್ಟಿಕ್ ರಸಾಯನಿಕಗಳ
ಎಸೆದು ಪೃಥ್ವಿಯ ಬರಡಾಗಿಸದಿರೆ..
ನಿರಂತರ ಕತ್ತಲೊಳಗೆ ಕೊಳೆತ
ಕಳ್ಳ ಠಕ್ಕನಿಗೆ ಶಿಕ್ಷೆಯಾದಂಥ
ಇಳೆಗೆ ಎಳೆಬಿಸಿಲ ಹೊತ್ತು ರವಿಯಿಳಿದಂಥ
ಬೆಳದಿಂಗಳ ಚಂದಿರನಂಥ
ಪರೋಪಕಾರಿಯಾದ ಬೆಳಗಾಗಲಿ..
ದೈತ್ಯ ರಾಕ್ಷಸನ ಸದೆಬಡಿದ
ಪುಟಾಣಿ ದೇವ ಕೃಷ್ಣನ ಶಕ್ತಿ
ಪರಾಕ್ರಮವೆಸೆವ ದೆಸೆಯಲಿ
ಮನವನರಿತು ಬದುಕಲೆಂಬ
ಪರರಿಗನುಕೂಲವಾಗುವ ಬೆಳಗಾಗಲಿ..
ಮುತ್ತು ಕೊಟ್ಟು ರಮೆಯನೊಲಿಸಿ
ತುತ್ತು ಕೊಟ್ಟು ಮಗುವ ರಮಿಸಿ
ಸುತ್ತು ಬಳಸಿ ಬದುಕು ಸವಿಸಿ
ಸತ್ತು ಬದುಕುತಿರುವ ಜನರ
ಜೀವನ ಬದಲಾಗುವಂಥ ಬೆಳಗಾಗಲಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ