ಭಾನುವಾರ, ಸೆಪ್ಟೆಂಬರ್ 9, 2018

453. ಹನಿಹನಿಗೆ

ಸಂಡೆಯಬ್ಬರ

ಸಂಡೆಯಬ್ಬರ ಕವನಗಳಾಗರ
ಹರಿದು ಬರುತಲಿದೆ ಮನದುಂಬಿ...
ಯತೀಶರು ನಾನವನೆಂದರು.
ವೆಂಕಟೇಶರು ಹುಷಾರೆಂಬ
ಎಚ್ಚರಿಕೆ ಕೊಟ್ಟರು.

ಜಯಲಕ್ಷ್ಮಿಯವರು ಒಲವಾನುಬಂಧವ ತಂದರು.
ನೂರ್ ಅಹಮ್ಮದರು ಒಂಟೆಯ
ನೋಡಿ ಸಂತಸ ಪಟ್ಟರು.

ಕವಿ ಛತ್ರದರು ಕಲಾವಿದರಾದರು.
ಕಂಟ್ಲಿಯವ್ರು ಪ್ರಶ್ನೆಯ ಕೇಳುತ ನಿಂದರು.
ಪಾರ್ವತಿಸಪ್ನರು ಬಾಲ್ಯವ ನೆನೆದರು.
ರಾಜೇಶ್ವರಿ ತಾಯಿ ವಿನಂತಿಸಿಕೊಂಡರು.

ತಾರೇಶಣ್ಣ ಪ್ರೀತಿಯ ಕರೆದರು.
ಬಸವರಾಜರು ಗಝಲನು ಹೆಣೆದರು
ಕುಮಾರಣ್ಣ ನಾಯಿ-ಕೊಡೆ ಸವಿದರು.
ಚಾಗಿಯವರು ಅಂತರ್ಮುಖಿಯಾದರು

ದುರ್ಗೇಕರರು ವಿದ್ಯೆಯ ಸಾರವರುಹಿದರು
ದಿನೇಶರು ಕವನದಿ
ನವಿಲನೆ ನಾಟ್ಯವಾಡಿಸಿದರು.
ಅನಿತಾ ತನ್ನ ಮನಸಿಗೆ ಕರೆಯಿತ್ತರು.
ರವಿ ತನ್ನುಸಿರಿಗೆ ಉಸಿರಾದರು

ಹನಿಹನಿ ತುಂಬಿತು

ಕವನದ ಸಾಲಲಿ ಸಾಹಿತ್ಯ ಕೃಷಿಯು
ನಿರಂತರವಾಗಿ ಹರಿಯುತ ಬರಲಿ
ಎಲ್ಲೆಡೆ ಹರಡಲಿ ಕನ್ನಡ ಕಂಪು
ಚಾವಡಿಯಾಗಲಿ  ವಿಮರ್ಷೆಯ ಗುಂಪು
ಖುಷಿಯಣ್ಣನ ಕನಸು ಆಗಲಿ ನನಸು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ