ಶನಿವಾರ, ಸೆಪ್ಟೆಂಬರ್ 1, 2018

443. ನೀ

ನೀ

ನನ್ನ ಮನದಲಿ ನೀ
ಜಗದಗಲಕೂ ನೀ
ಪ್ರಪಂಚವೇ ನೀ
ಮನದಾಸೆ ನೀ
ನನ್ನುಸಿರು ನೀ
ವಿಶ್ವಾಸ, ಸಂತೋಷ ನೀ
ಬುದ್ಧಿ, ಶುದ್ಧಿ ನೀ
ಮನದ ಮಲ್ಲಿಗೆ ನೀ
ಬನದ ವಸಂತವೂ ನೀ
ಬಾಳಿನ ಚಿಗುರು ನೀ
ವರ್ಷಧಾರೆ ಈ ಭುವಿಗೆ ನೀ
ಕತ್ತಲ ಬದುಕಿಗೆ ಚಂದಿರ ನೀ
ಹಗಲ ರವಿಯೂ ನೀ
ಹಣೆಯ ನೆರಿಗೆಯೂ ನೀ
ಬದುಕಿಗಾಸರೆ ನೀ
ಬೆರಳ ಶಕ್ತಿಯು ನೀ
ಮನದ ಯುಕ್ತಿಯು ನೀ
ಸನಿಹದಲೇ ಇರು ನೀ
ಜಗದ ತಾರೆಯಾಗು ನೀ
ನನ್ನ ಮಗುವೇ..
@ಪ್ರೇಮ್@

ಪ್ರೇಮ್ ರವರ,

ನೀ.  ನಿಲ್ಲದೇ
ನೀ....ನೀ....ನೀ.... ಎಂದು ಗುನುಗುತ್ತಾ ಬದುಕಿನ ಗುರಿಯಾದ ಮುಂದಿನ ಪೀಳಿಗೆಯ ಉನ್ನತಿಗೆ ಶ್ರಮಿಸುವ ಮನದ ಮನಗಳ ಮನುಗಳ ಭಾವ ಹಂದರವಾಗಿ ಸುಂದರವಾಗಿ ಮೂಡಿದೆ.

*ಪ್ರೇಮ್ ರವರ ನೀ*

ಸುಂದರವಾದ ಕವನ ಪ್ರೇಮ್ ರವರೇ....
👉🏻 ನಿಮ್ಮ ಮಗುವಿನ ಬಗ್ಗೆ ಈ ಕವನದಲ್ಲಿ ತಿಳಿಸಿದ್ದೀರಾ ಎನ್ನುವ ಭಾವನೆ...

👉🏻 ನಿಮ್ಮ ಜೀವನದಲ್ಲಿ ಮಗು ಸುಖ, ದುಃಖ, ಪ್ರೀತಿ, ಪ್ರೇಮ, ತನು, ಮನ,ಧನ, ಎಲ್ಲಾ ಭಾವನೆ ಮಗು ಎಂದು ತೋರಿಸಿಕೊಟ್ಟಿದ್ದೀರಾ...

👉🏻 ನಿಮ್ಮ ಜೀವನ ಎಲ್ಲಾ ಸಕಲ ಕಾರ್ಯವೆಲ್ಲವೂ ಮಗುವೇ  ನೀ ಎಂದು ಕವನದಲ್ಲಿ ಎದ್ದು ಕಾಣುತ್ತದೆ.... ಉತ್ತಮವಾಗಿದೆ.

ತಪ್ಪಿದ್ದಲ್ಲಿ ಕ್ಷಮೆ ಕೇಳುವ ಸಾಮಾನ್ಯ ಸಾಹಿತ್ಯ ಕುವರ ಅಶೋಕ ಪಿ.ಎನ್...
👍

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ