ಸೋಮವಾರ, ಸೆಪ್ಟೆಂಬರ್ 10, 2018

455.ಕೂಗು

ಕೂಗು

ಹೊಡೆದಾಟ ನಿಮ್ಮದು ಮೂರ್ಖರೆ
ದೇಹ ನನ್ನದು ಧೂರ್ತರೆ
ರಾಜಕೀಯಕೆ ಹೋರಾಡುವಿರಿ
ಎನ್ನೆದೆಯಲಿ ಹೊಡೆದಾಡುವಿರಿ

ಬಂದ್ ಮಾಡಿ ಟೈರುಗಳ ಸುಡುವಾಗ
ಉಸಿರಾಟದ ವಾಯುವಿನ ನೆನಪಾಗದೆ..
ಸುಡುವ ಅದೇ ಬೆಂಕಿಯು ನಮ್ಮತ್ತ ತಿರುಗಿದರೆ
ಧರಣಿಯೊಳಾಗುವ ಧರಣಿಗೆ ಕೊನೆಯುಂಟೆ..

ಬರಸಿಡಿಲ ಬೇಗೆ ಒಬ್ಬನಿಗಾದರೆ
ಬರೆಯನುಭವ ಕಡು ಬಡವನಿಗಲ್ಲವೆ?
ಒಂದು ದಿನದ ದುಡಿಮೆಯದು
ಆ ದಿನದ ಊಟಕ್ಕೆ, ಉಪವಾಸದ ಬಂದ್ ಹೊಟ್ಟೆಯೊಳಗೆ!!

ನಿಮ್ಮಗಳ ನೋವು ನಿಮಗೆ ಭಾರ
ನನ್ನ ನೋವ ಕೇಳುವವ ಯಾರ?
ಬಿರುಬಿಸಿಲ ಬೇಗೆ ಸುಡುತಿಹುದೆನ್ನ
ಮನುಜ ನಾ ತಿರುಗುವುದ ನಿಲಿಸಲೇ ನೋಡಿ ನಿನ್ನ?

ಶಾಂತಿಯಲಿ ಕಾರ್ಯಗಳ ಮುಗಿಸಲು ಬೇಕು
ಕ್ರಾಂತಿಯಲಿ ನಾಶವು ಸರ್ವರ ಬದುಕು
ಬೆಳೆಸಿರಿ ಹಸಿರ, ಹಿಡಿ ಸೈಕಲ್ ಗಳ
ಹೈಫೈ ಬದುಕಲಿ ಸಾಲು ಟೆನ್ಶನ್ ಗಳ

ಮನುಜನಾಸೆಗೆ ಕೊನೆಯೆಂಬುದೆಲ್ಲಿ
ತನ್ನ ಕಾಲಿಗೆ ತಾನೇ ಹಾಕುವ ಕೊಡಲಿ
ಎಲ್ಲ ಪಕ್ಷಗಳೂ ಒಂದೆ , ಅರಿತವ ಜಾಣ
ಒಂದಾಗಿ ಭಾರತಿಗೆ ಜೈಕಾರ ಕೂಗೋಣ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ