ಮಂಗಳವಾರ, ಸೆಪ್ಟೆಂಬರ್ 4, 2018

448.ಗುರು

ಗುರುವಿಗೆಲ್ಲಿಯ ಸ್ಥಾನ

ಅದೊಂದಿತ್ತು ಕಾಲ
ಶಿಕ್ಷಕನೆಂದರೆ ಶಿಸ್ತಿನ ಸಿಪಾಯಿ
ಊರಿಡೀ ಅವನದೇ ಶಿಷ್ಯರು
ಆ ಊರಲ್ಲಿ ಅವನಿಗೇ ಮಣೆ
ಅವನಿಲ್ಲದೆ ಕಾರ್ಯಕ್ರಮವಿಲ್ಲ..

ಕಾಲ ಬದಲಾಗಿದೆ ಜನಮನ ಬದಲು
ಶಿಕ್ಷಕನೂ ಮೊದಲಿನಂತಿಲ್ಲ
ಹಿಂದಿನಂತೆ ಉಳಿಸಲಾಗಿಲ್ಲ
ಸಮಾಜ ಏನು ಮಕ್ಕಳೇ ಬೆಲೆ ಕೊಡಲ್ಲ
ಬಡಪಾಯಿ ಇಂದು..

ಬದುಕಲಾರದೆ ಬದುಕುತಿಹನಿವ
ಲಂಚವಿಲ್ಲದ ಸಾದಾ ಬದುಕು
ದುಡಿತ ಊಟ ತಿಂಡಿ ಬಟ್ಟೆಗೆ
ತಿಂಗಳ ಕೊನೆಗೆ ಎಣಿಸಲು
ಸಂಬಳ ಕೈಲಿ ಉಳಿದರೆ ತಾನೇ.

ಜ್ಞಾನವನ್ನೆ ನಂಬಿ ಅದ ಧಾರೆ ಹರಿಸಿ
ಸಮಾಜಕ್ಕೆ ಜೀವದುಂಬುವ ಗುರು
ಬರೀ ಮೂಲೆ ಗುಂಪಾಗಿಹನು..
ರಾಜಕೀಯದ ಡೊಂಬರಾಟದಲಿ
ಓಟಿಗೆ ಮೂಟೆ ಹೊರುವವ ಅಷ್ಟೆ!

ಸಾವಿರಾರು ಪ್ರಯೋಗ ಪ್ರತಿದಿನ
ಗುರುಗಳು ಬೋಧಿಸಲು ಕಾಲವೆಲ್ಲಿ?
ತರಕಾರಿ,ಊಟ,ಹಾಲು,ಸ್ವಚ್ಛತೆ
ಕಡತಗಳು,ಬಿಲ್ಲುಗಳು, ಅಪ್ ಲೋಡ್ಸ್
ದಾಖಲೆಗಳ ಸರದಾರನಿಂದು ಶಿಕ್ಷಕ!!!
@ಪ್ರೇಮ್@

*ನಮಸ್ತೇ*
🙏🏻🙏🏻🙏🏻🙏🏻
*ಪ್ರೇಮ ಅವರ ಗುರುವಿಗೆಲ್ಲಿಯ ಸ್ಥಾನ*

        ಮೇಡಂ  ಶೀರ್ಷಿಕೆ ಗೆ ತಕ್ಕಂತೆ ಕವನ ಪ್ರತಿ ಸಾಲು ಅದರ ಒಳ ಹೂರಣವನ್ನು ತೆರೆದಿಡುತ್ತದೆ, ಹೌದು ನೀವು ಹೇಳಿದಂತೆ ಅಂದಿನ ಶಿಕ್ಷಣ ವ್ಯವಸ್ಥೆಗೂ ಇಂದಿನ ಶಿಕ್ಷಣ ವ್ಯವಸ್ಥೆ ಗೂ ಅಜಗಜಾಂತರ ವ್ಯತ್ಯಾಸವನ್ನು ನೋಡಬಹುದಾಗಿದೆ.

      ಇಂದು ಹಲವು *ಆ ಭಾಗ್ಯ ಈ ಭಾಗ್ಯ* ಅಂತ ಶಿಕ್ಷಕರ ಭವಿಷ್ಯವೆ ಒಂದು ದೌರ್ಭಾಗ್ಯ ಅನ್ನುವಂತಹ ಸ್ಥಿತಿಗೆ ಬಂದು ಬಿಟ್ಟಿದೆ, ಆಗಿನ ಗೌರವ ಇಂದು ಸಿಗುವ ಗೌರವ, ಎಲ್ಲಾ ವಿಚಿತ್ರ. ಗುರುಶಿಷ್ಯರ ಮನಸ್ಥಿತಿಗಳು ವಿಭಿನ್ನ ವಿಚಿತ್ರ,,, ಹಾಗಾಗಿ ಎಲ್ಲಾವು ಅಯೋಮಯ ಎಂಬಂತಿದೆ ಪರಿಸ್ಥಿತಿ.

👉ಸುಂದರವಾಗಿ ಮೂಡಿ ಬಂದಿದೆ  ನಿಮ್ಮ ಕವನ ಸರಳಪದಗಳೊಂದಿಗೆ,
👉ಇನ್ನೂ ತೌಲನಿಕವಾಗಿ ವಿಮರ್ಶೆ ಗೊಳಪಡುವಂತಿದೆ.
👉ವಾಸ್ತವ ಸತ್ಯವನ್ನು ತೆರೆದಿಟ್ಟಿದೆ.
👉 ಸುಂದರವಾಗಿ ಬರೆಯುವ ನಿಮಗೆ ಶುಭವಾಗಲಿ ಮೇಡಂ ಜಿ.

   *ಧನ್ಯವಾದಗಳೊಂದಿಗೆ*

                ✍  *ವಾಣಿ ಭಂಡಾರಿ*

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ