ಬದುಕು
ಬರಡಾದ ಬದುಕಿಗೆ ಬಾಳ ಜ್ಯೋತಿ
ಬಸವಳಿದ ಬಾಳಿಗೆ ಶಶಿಕಿರಣ
ಬೆಂದು ಬೆವರಿಳಿಸಿ ಸುಸ್ತಾದ ಮನಕೆ
ಬೆರಳ ಹಿಡಿದು ಮುನ್ನಡೆಸುವರು ಸ್ನೇಹಿತರು..
ಭಯದಿ ಮರುಗಟ್ಟಿ ಜಗಬೇಡವೆಂದಾಗ
ಬಾಳ್ವೆಯೊಳಗೆ ಆಸಕ್ತಿಯ ಬೆಳೆಸಿ
ಬರಸಿಡಿಲಂತೆ ಬಂದು ಸಹಕರಿಸಿ
ಬದಲಾವಣೆ ತರುವವರು ಸ್ನೇಹಿತರು
ಬವಣೆಯೊಳಗೆ ಮುಳುಗೆದ್ದು
ಭವಸಾಗರ ದಾಟಲಾರದೆ ಬಿದ್ದು
ಬಾವಿಯೊಳಗಿನ ಕಪ್ಪೆಯಂತಾದಾಗ
ಭವಿತವ್ಯ ಬರೆವವರು ಸ್ನೇಹಿತರು
ಭೋಗ ಭಾಗ್ಯದ ಬಲೆಗೆ ಸಿಕ್ಕಿ
ಬಕಪಕ್ಷಿಯಂತಾಗಿ ನೀರ ಸೆಲೆ ಸಿಗದೆ
ಬನದಲಿ ಒಂಟಿಯೆನಿಸಿದಾಗ
ಸಹಾಯಕ್ಕೆ ಬರುವವರು ಪ್ರಾಣ ಸ್ನೇಹಿತರು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ