ನನ್ನ ಕಣ್ಣು
ಕುಳಿತಲ್ಲಿಯೆ ಕೂರಲಾರದೆ
ಅತ್ತಿಂದಿತ್ತ ಓಡಾಡುವ
ನನ್ನ ಪುಟ್ಟ ಮುದ್ದು ಪಾಪ
ಚಂಚಲದಿ ಓಡಾಡುತ್ತಾ..
ಅಮ್ಮನೊಡನೆ ಹಠವು ಹೆಚ್ಚು
ಅಪ್ಪನೊಡನೆ ಅಚ್ಚುಮೆಚ್ಚು
ರಂಪವಾಡೆ ಯಾರು ಬೇಕು
ಮನೆಯಲೆಲ್ಲ ತನ್ನ ಮಾತೆ ಮೇಲು.
ಮುದ್ದು ಪೆದ್ದು ಮಾತು ಚಂದ
ಲಲ್ಲೆಗರೆವ ಮನವು ಅಂದ
ಇಷ್ಟವೆನಗೆ ಮನಕಾನಂದ
ಹರಟೆಯೇಕೆ ನನ್ನ ಕಂದ?
ಬದುಕಲುಂಟು ಮನದ ನಂಟು
ಜೀವ ಜಗದಲೇನು ಉಂಟು
ಕಂದ ನಿನ್ನ ಮನವು ಸ್ಪೂರ್ತಿ
ನನ್ನ ಬಾಳಿಗದುವೆ ಕೀರ್ತಿ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ