ಗಝಲ್
ಮೌನದ ಸದ್ದಡಗಿಸಿ ಬೆಳೆವುದೀ ಮಾತು
ಬೆಳ್ಳಿಯೆನಿಸಿಕೊಂಡು ಸುಳಿವುದೀ ಮಾತು
ತನ್ನೊಡಲ ನಾಲಗೆಯಲೆ ಕುಣಿಯುವುದು
ಸಿಹಿ ಕಹಿಯ ಬೆರೆಸುವುದೀ ಮಾತು.
ಸುಲಭದಲಿ ಸಂಬಂಧಗಳ ಬೆಸೆಯುವುದು
ಗೆಳೆತನಗಳ ಕದಡಿ ಕೆಡಿಸುವುದೀ ಮಾತು.
ವಾಗ್ಯುದ್ಧಕ್ಕೆ ಕಾರಣವು ಕೆಟ್ಟ ಮಾತು
ಮನೆ-ಮನಗಳ ಜೋಡಿಸುವುದೀ ಮಾತು.
ಸಿನಿಮಾ, ಧಾರಾವಾಹಿಗೆ ಬೇಕಾದದ್ದು ಮಾತು
ವಾರ್ತೆಗಳು ಹರಡಲೂ ಬೇಕಾದುದೀ ಮಾತು.
ಪ್ರೀತಿ ದುಪ್ಪಟ್ಟಾಗಲು ಸಂಪ್ರೀತಿ ಮಾತು
ಸ್ನೇಹ ಕಡಿಯಲು ಮುಳ್ಳಿನಂತಾಗುವುದೀ ಮಾತು.
ಕವನಗಳ ಕಟ್ಟಿ ಕನ್ನಡವ ಬೆಳೆಸುವುದು ಮಾತು
ಮನೆಕೆಡಿಸಿ ಮನಕೆಡಿಸಿ ಹಾಳುಗೆಡವುದೀ ಮಾತು!
ಪ್ರೇಮದಿ ಮಾತನಾಡಲು ಬೆಳಗುವುದು ಬದುಕು
ಪ್ರೀತಿಯ ಕರೆಗೆ ಓಗೊಡುವುದೀ ಮಾತು..
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ