ಆಸೆ
ಸಾಗರದೊಳಗಡೆ ನುಗ್ಗುತ ಬರುವ
ಅಲೆಯಾಗುವ ಆಸೆ
ಕಡಲಿನ ಒಡಲಿನ ಬಗೆಯುತಲಿರುವ
ನೊರೆಯಾಗುವ ಆಸೆ..
ಉಕ್ಕುವ ತೆರೆಯಲಿ ತೇಲುತ ಬರುವ
ಹುಲ್ಲಾಗುವ ಆಸೆ
ಚಂದ್ರನ ಬೆಳಕಿಗೆ ಉಕ್ಕುತ ಬರುವ
ಶರಧಿಯಾಗುವ ಆಸೆ
ಸಮುದ್ರದ ತಟದಲಿ ಹರಡುತಲಿರುವ
ಚಿಪ್ಪಾಗುವ ಆಸೆ
ದಡದೆಡೆ ಬಂದು ಹಾಯಾಗಿ ಮಲಗುವ
ಮರಳಾಗುವ ಆಸೆ.
ಬಿಳಿ ಬಿಳಿ ಬಣ್ಣದ ನೊರೆಯೊಳಗಿರುವ
ಹನಿಯಾಗುವ ಆಸೆ
ಕಡಲಿನ ನೀರಲಿ ಅವಿತು ಕುಳಿತಿಹ
ಉಪ್ಪಾಗುವ ಆಸೆ
ಸಾಗರದಡಿಯಲಿ ಹೊಳೆಯುತಲಿರುವ
ಮುತ್ತಾಗುವ ಆಸೆ
ಹವಳದ ದಿಬ್ಬದ ಕಸವನು ತಿವಿಯುವ
ಮೀನಾಗುವ ಆಸೆ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ