ಅಂದ
ಬದುಕಿನಂದ ಏನು ಚಂದ
ಗೆಳೆಯ- ಗೆಳತಿ,ಪುಟ್ಟ ಕಂದ
ಒಡನೆ ಬಂಧವಾದ ಸಂಬಂಧ
ಅರಿತ ಅರ್ಧಾಂಗಿ ಬಾಳು ಶ್ರೀಗಂಧ..
ಏರುತಲಿ ಬಾಳು ಎತ್ತರೆತ್ತರ
ನಲಿವ ಕುಣಿವ ಬಾಳೆ ಅಂಬರ
ವದನದಲಿ ಮನದ ಕಾಂತಿ
ಬಯಸಬೇಕು ವಿಶ್ವಶಾಂತಿ..
ಅಂಕೆಯಲಿ ನಗಲು ಹವ್ಯಾಸ
ಸಂಖ್ಯೆ ನಗುವ ಅಟ್ಟಹಾಸ
ಬಾನ ಬಾಳ ಮಂದಹಾಸ
ಬದುಕಲಿರಲು ವಸಂತ ಮಾಸ..
ಒಂದು ಕೊಂಡಿಯೊಳಗೆ ಉಸಿರು
ಮಂದ ಬೆಳಕ ಜಗದ ಬಸಿರು
ಭೂಮಿಯೊಡಲು ನಿತ್ಯ ಹಸಿರು
ಬದುಕು ಅಂದ ಭವದ ಹೆಸರು.
@ಪ್ರೇಮ್@
18.
ಕವಿಯತ್ರಿ:ಪ್ರೇಮಾ
ಕವಿತೆ:ಅಂದ
ಪ್ರಾಸಕ್ಕಾಗಿ ಕವಿತೆ ರಚಿಸಬೇಡಿ, ಪ್ರಾಸಕ್ಕಾಗಿ ಕಟ್ಟು ಬೀಳಬೇಡಿ ಮೇಡಂಜಿ.....
ಸುಂದರ ಕವನ ಓದಿಸಿದ ತಮಗೆ ಧನ್ಯವಾದಗಳು.....
ಶಿವಕುಮಾರ ಕರನಂದಿ✍🏻
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ