ಜನಮನ
ಆವರಿಸಿದೆ ಮೌನವದು
ಜನಮನದ ಗೂಡಿನಲಿ
ಜಂಗಮವಾಣಿಯ ಕರೆಯ
ಕೇಳುವವರೆ ಇಲ್ಲವಿಲ್ಲಿ..
ಬೇಕೆಲ್ಲ ಮನಕೂ ಇಂಟರ್ ನೆಟ್
ಮುಖ ಪುಟ, ಮೆಸೆಂಜರ್ ವಾಟ್ಸಪ್ಪು
ಮಕ್ಕಳು ಕೇಳುತಿವೆ ಎಲ್ಲರಲಿ
ಮೊಬೈಲ್ ನಂತೆ ನನ್ನ ಅಪ್ಪು..
ಮಾತಿಗಿಲ್ಲಿ ಸಮಯವಿಲ್ಲ
ಬರೆಯಲು ಓದಲು ಪುರುಸೊತ್ತಿಲ್ಲ
ಬೇಕು ಸ್ಮೈಲಿ, ಸ್ಟಿಕರ್ಸ್ ,ಲೈಕು
ಹಿಡಿದರೆ ಬಿಡಲಾರರು ಮೈಕು..
ಮನೆ ಕಛೇರಿಯಲ್ಲೆಲ್ಲ ಮೌನ
ಹೊರದೇಶದ ಗೆಳೆಯರದೇ
ಇಡೀ ದಿನ ಧ್ಯಾನ..
ಬಂದು ಹೋಗುತಲಿವೆ
ಫೋಟೋಗಳ ಸರಮಾಲೆ
ಮಾತಿಲ್ಲ ಯಾವ ನೆಂಟರಲೂ
ಬಂಧು ಬಳಗವೂ ಮೌನ
ಮನೆ ಮನವು ಹಗುರಾಗಲು
ಮುರಿಯ ಬೇಕೀ ಮೌನ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ