ಮನದ ಕತ್ತಲು ಕಳೆಯಲಿ
ಕತ್ತಲು ಕವಿದಿದೆ ಬಾನಿಗೆ ಅಲ್ಲ
ಭುವಿಗೂ ಮಾತ್ರವೆ ಅಲ್ಲವೆ ಅಲ್ಲ
ಕತ್ತಲು ಕವಿದಿದೆ ಜನಮನಕೆಲ್ಲ
ಅಂಧಕಾರವ ನೀಗಿಸೆ ದೇವರೆ ಬಲ್ಲ..
ಮನದಲಿ ಮೂಡಿದೆ ದುರಾಸೆಯ ಜಾಲ
ಎಳೆವರು ಒಬ್ಬರು ಇನ್ನೊಬ್ಬರ ಕಾಲ
ಇಂದಿನ ಹಾಗೆ ಎಲ್ಲರಿಗೂ ಇದೆ ಒಂದು ಕಾಲ
ಹಾಗಾಗಿಯೆ ಇಳೆಗೆ ಬಂದಿದೆ ಬರಗಾಲ..
ತಲೆಯಲಿ ಒಂದು, ಮನದಲಿ ಮತ್ತೊಂದು
ದಿನವೊಂದಿದೆ ಕಾಲನ ಕೈಯಲಿ ಸೇರಲುಕ್ಕೆಂದು
ಜತೆಯಲೆ ಇರುತಲಿ ಒಳ್ಳೆ ಬಯಸಲು ಬೇಕು
ಬಾಳುತ ಬಾಳಲು ಬಿಡಲು ಬೇಕು
ಮನಗಳ ಕತ್ತಲು ಕಳೆಯಲು ಬೇಕು
ಪ್ರೀತಿಯ ಬಳ್ಳಿಯು ಹಬ್ಬಲೇ ಬೇಕು
ತನ್ನಂತೆ ಪರರೆಂದು ಅರಿಯಲು ಬೇಕು
ಸ್ವಾರ್ಥ ದುರಾಸೆ ರಹಿತ ಸಮಾಜ ರೂಪಿಸಬೇಕು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ