ಕಣ್ಣಲ್ಲಿ
ಮಕ್ಕಳ ಕಾಪಿಡಲು ತಾಯಿ ಸದಾ
ತನ್ನೊಲವ ದಿಟ್ಟಿಯನು ಮೇಲಿರಿಸುವ ತೆರದಿ
ಭೂ ತಾಯಿಯು ಕಂದರ
ಪೊರೆದು ಕಾಯುತಲಿಹಳು
ತನ್ನ ದಿಟ್ಟ ನೋಟದಿ ದಿಟ್ಟಿಸುತಲಿ..
ಕಣ್ಣಲ್ಲಿ ಕಣ್ಣಿಟ್ಟು ಸಲಹುವ
ಮಾತೆಗೆ ತಿಳಿಯದೆ ಮನುಜನ
ಅಹಂಭಾವದ ಹುಟ್ಟಡಗಿಸುವ ಪರಿ?
ಯಾವ ಜಾತಿ ಯಾವ ನೀತಿ
ಯಾವುದಿಲ್ಲ ತಾಯಿಗೆ
ಎಲ್ಲರೊಂದೆ ಮಕ್ಕಳೆ
ತಾಯಿ ವರವ ನೀಡುವಾಗ
ಜಾತಿ ಧರ್ಮ ಬೇಧವಿಲ್ಲ
ಶಾಪ ನೀಡಿ ಶಿಕ್ಷೆ ಕೊಡುವಾಗಲೂ
ಹಿರಿಯ ಕಿರಿಯರೆಂಬುದಿಲ್ಲ..
ಮಳೆಯೋ ಬಿಸಿಲೋ ಬರದ ಸಿಡಿಲೋ
ಒಂಟಿ ಅಲ್ಲ ತಾಯಿ ಮಡಿಲು
ಅಮ್ಮ ತನ್ನ ಮಗುವಿಗಾಸರೆ
ಕಂದರೆಲ್ಲ ಮಾತೆಯ ಕೈಸೆರೆ
ಮನದ ಮಗುವು ಮಾತೆಗಿಷ್ಟ
ತನುವ ಕೊಟ್ಟು ಸಾಕಿ ಸಲಹಿ
ತನ್ನ ನೋವನೆಲ್ಲ ಮರೆತು
ಬೆಳೆಸಿ ತನಗೆ ಖುಷಿಯ ದೊರೆತು...
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ