ಮಂಗಳವಾರ, ಸೆಪ್ಟೆಂಬರ್ 18, 2018

466. ಕ್ಷಮಿಸಮ್ಮಾ

ಕ್ಷಮಿಸೆಮ್ಮನು

ತಾಯೆ ಭರತಮಾತೆ ಕ್ಷಮಿಸೆಮ್ಮನು
ವಿಷದ ಸಿಹಿಯ ತಿಂದು ಕವರ
ಬಿಸುಟಿಹೆನು ನಿನ್ನೊಡಲಿಗೆ..
ಸಿಪ್ಪೆ ಸಹಿತ ಬಟಾಟೆ ಚಿಪ್ಸ್
ತಿನ್ನಲಾಗದೆಂದು ತಿಳಿದು
ಅದರ ಪ್ಲಾಸ್ಟಿಕ್ ಸಿಪ್ಪೆ ನಿನ್ನ
ಮೇಲೆ ನಾನು ಎಸೆದಿಹೆನು..

ಮೊಟ್ಟೆ ತಿಂದು ಸಿಪ್ಪೆ ಸುಲಿದು
ಹಣ್ಣು ತಿಂಡಿ ಬ್ರೆಡ್ಡು ಉಳಿದು
ಸೋಪು ಶ್ಯಾಂಪು ಎಲ್ಲ ಬಳಸಿ
ಉಳಿದುದನ್ನು ನಿನಗೆ ಉಳಿಸಿ
ವಿನಾಶದಂಚಿಗೆ ದೂಡಿ ಕೆಡಿಸಿ

ಅಮ್ಮ ನಾನು ನಿನ್ನ ಮಗುವೆ
ನಿನ್ನಿಂದಲೆ ನಿತ್ಯ ನಗುವೆ
ನಿನಗೇನು ನಾನು ಕೊಡುವೆ
ಬೇಡದ ವಿಷ ರಾಸಾಯನಿಕವ
ಅಳೆದು ಸುರಿದು ಜಗವ ಕೆಡಿಸಿ

ಪರಿಸರವೆಲ್ಲ ಹಾಳುಗೆಡವಿ
ತನ್ನ ಕಾಲಿಗ್ಹಾಕಿ ಕೊಡಲಿ
ಮಕ್ಕಳಿಗೂ ವಿಷವ ಸುರಿದು
ಮಣ್ಣು ಗಾಳಿ ನೀರು ಕೆಡಿಸಿ
ಕೇಳುತಿರುವೆ ನನ್ನ ಕ್ಷಮಿಸಮ್ಮಾ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ